- ಇಂದಿನಿಂದ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ.
- ಕೇದಾರನಾಥ, ಯಮುನೋತ್ರಿ ದೇವಾಲಯಗಳು ಬೆಳಗ್ಗೆ 7 ಗಂಟೆಗೆ ತೆರೆದರೆ, ಗಂಗೋತ್ರಿ ದೇವಾಲಯವು ಮಧ್ಯಾಹ್ನ 12. 20ಕ್ಕೆ ತೆರೆಯುತ್ತದೆ
ದೇಶದ ಅತ್ಯಂತ ಹಳೆಯ ಮತ್ತು ಖ್ಯಾತ ಪವಿತ್ರ ಯಾತ್ರಾ ಸ್ಥಳಗಳಲ್ಲಿ ಒಂದಾದ ಕೇದಾರನಾಥ ಧಾಮವು ಒಂದು. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಚಾರ್ ಧಾಮ್ ಯಾತ್ರೆ ಕೂಡ ಒಂದಾಗಿದೆ. ಕೇದಾರನಾಥ ಹಾಗೂ ಬದರಿನಾಥ ಧಾಮಗಳ ಮುಂದಿನ ದಿನಗಳಲ್ಲಿ ಭಕ್ತರ ಸಮೂಹ ಹರಿದುಬರಲಿದೆ. ಇಂದಿನಿಂದ ಚಾರ್ಧಾಮ್ ಯಾತ್ರೆ ಆರಂಭವಾಗಲಿದೆ. 6 ತಿಂಗಳಿಗೆ ಒಮ್ಮೆ ತೆರೆಯುವ ಈ ಯಾತ್ರಾ ಸ್ಥಳಗಳಿಗೆ ದೇಶ- ವಿದೇಶಗಳಿಂದ ಯಾತ್ರಾರ್ಥಿಗಳು ಬೇಟಿ ನೀಡುತ್ತಾರೆ…
![](https://guaranteenews.com/wp-content/uploads/2024/05/1200-675-21431711-thumbnail-16x9-ok11-1024x576.webp)
ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳು ಬೆಳಗ್ಗೆ 7 ಗಂಟೆಗೆ ತೆರೆದರೆ, ಗಂಗೋತ್ರಿ ದೇವಾಲಯವು ಮಧ್ಯಾಹ್ನ 12. 20ಕ್ಕೆ ತೆರೆಯುತ್ತದೆ. ಮೇ 12 ರಂದು ಬೆಳಗ್ಗೆ 6 ಗಂಟೆಗೆ ಉತ್ತರಾಖಂಡದ ಚಾರ್ಧಾಮ್ ಯಾತ್ರೆಯ ಭಾಗವಾಗಿರುವ ಬದರಿನಾಥ್ ಅನ್ನು ತೆರೆಯಲಾಗುತ್ತದೆ. ಏಪ್ರಿಲ್ 15ರಿಂದ ಪ್ರಾರಂಭಚಾದ ಆನ್ಲೈನ್ ನೋಂದಣಿ ಈಗ ಜೂನ್ ತಿಂಗಳವರೆಗೆ ಲಭ್ಯವಿದೆ. ಏಕೆಂದರೆ ಮೇ ತಿಂಗಳ ಆರಂಭದ ವೇಳೆಗೆ ಆನ್ಲೈನ್ ನೋಂದಣಿ ಸಂಖ್ಯೆ 21 ಲಕ್ಷ ದಾಟಿದೆ.