ಕೆಲವು ದಿನಗಳ ಹಿಂದಷ್ಟೇ ಚೆನ್ನೈನ ಅಪಾರ್ಟ್ಮೆಂಟ್ವೊಂದರ ಮಹಡಿಯಿಂದ ಎಂಟು ತಿಂಗಳ ಮಗು ಬಿದ್ದು ಅದೃಷ್ಟ ಎಂಬಂತೆ ಬುದುಕುಳಿದಿತ್ತು. ತಾಯಿ ಹಾಲುಣಿಸುತ್ತಿದ್ದಾಗ ಕೈ ಜಾರಿ ಮಗು ಬಿದ್ದಿದೆ ಎಂದು ಹೇಳಲಾಗಿದೆ. ಈ ಘಟನೆಯ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಮಗುವನ್ನು ಸರಿಯಾಗಿ ನೋಡಿಕೊಳ್ಳದ್ದಕ್ಕೆ ತಾಯಿಯ ಬಗ್ಗೆ ಹಲವು ಟೀಕೆಗಳು ವ್ಯಕ್ತವಾಗಿತ್ತು. ಆದರೆ ಆ ಮಗುವಿನ ತಾಯಿ ರಮ್ಯಾ ಅವರನ್ನು ಈ ಘಟನೆ ಇನ್ನಷ್ಟು ಘಾಸಿಗೊಳಿಸಿತ್ತು ಎಂದು ರಮ್ಯಾ ಅವರ ಕುಟುಂಬದವರು ತಿಳಿಸಿದ್ದಾರೆ.