ಚೆನ್ನೈನ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ದಕ್ಷಿಣ ಆಫ್ರಿಕಾ ಮಹಿಳಾ ತಂಡಗಳ ನಡುವಿನ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ ವನಿತಾ ಪಡೆ 10 ವಿಕೆಟ್ಗಳಿಂದ ಗೆದ್ದುಕೊಂಡಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಶೆಫಾಲಿ ವರ್ಮಾ 197 ಎಸೆತಗಳಲ್ಲಿ 205 ರನ್ ಗಳಿಸಿದ್ದರೆ, ಸ್ಮೃತಿ ಮಂಧಾನ 249 ರನ್ ಗಳಿಸಿದರು. 6 ವಿಕೆಟ್ ನಷ್ಟಕ್ಕೆ 603 ರನ್ ಗಳಿಸಿದ್ದಾಗ ಭಾರತ ತಂಡ ಡಿಕ್ಲೆರ್ ಮಾಡಿತ್ತು. ಭಾರತೀಯ ಬೌಲರ್ಗಳು ದಕ್ಷಿಣ ಆಫ್ರಿಕಾವನ್ನು 266 ರನ್ಗಳಿಗೆ ಕಟ್ಟಿ ಹಾಕಿದರು. 337 ರನ್ ಹಿನ್ನಡೆಯಲ್ಲಿದ್ದ ದಕ್ಷಿಣ ಆಫ್ರಿಕಾಗೆ ಭಾರತ ಫಾಲೋ ಆನ್ ಏರಿತು.
2 ನೇ ಇನ್ನಿಂಗ್ಸ್ನಲ್ಲಿ ದಕ್ಷಿಣ ಆಫ್ರಿಕಾ ಪರ ನಾಯಕಿ ಲೌರ 122 ರನ್, ಸುನ್ ಲುಸ್ 109 ಹಾಗೂ ನದೀನ್ ಡಿ ಕ್ಲಾರ್ಕ್ ಅವರ 61 ರನ್ ನೆರವಿನಿಂದ 373 ರನ್ ಗಳಿಸಿ 32 ರನ್ಗಳ ಗುರಿ ನೀಡಿತು. ಇದನ್ನು ಭಾರತ ತಂಡವು 9.2 ಓವರ್ಗಳಲ್ಲಿ ವಿಕೆಟ್ ನಷ್ಟಗಳಿಲ್ಲದೇ ವಿನ್ ಆಯಿತು.