ರಾಜ್ಯ ರಾಜಕಾರಣದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಸಾಕಷ್ಟು ಶ್ರಮ ಪಟ್ಟಿತ್ತು. ಅದರಲ್ಲೂ ಚಿಕ್ಕೋಡಿ ಕ್ಷೇತ್ರ ಜಿದ್ದಾಜಿದ್ದಿನ ಕ್ಷೇತ್ರವಾಗಿತ್ತು. ಈ ಕ್ಷೇತ್ರದಲ್ಲಿ ಈಗ ಭರ್ಜರಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಜಾರಕಿಹೊಳಿ ಇತಿಹಾಸ ನಿರ್ಮಿಸಿದ್ದಾರೆ.
63 ಸಾವಿರಕ್ಕೂ ಹೆಚ್ಚು ಮತಗಳ ಪಡೆದು ಬಿಜೆಪಿ ಅಭ್ಯರ್ಥಿಯನ್ನ ಸೋಲಿಸಿದ್ದಾರೆ. 27 ವರ್ಷದ ಪ್ರಿಯಾಂಕ ಜಾರಕಿಹೊಳಿ ಪ್ರಥಮ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲಿಲ್ಲದ ಗೆಲುವಿನ ಓಟ ಆರಂಭಿಸಿದ್ದು, “ದಿ ಯಂಗೆಸ್ಟ್ ಎಂಪಿ ಕ್ಯಾಡಿಡೆಟ್ ಆಫ್ ಕರ್ನಾಟಕ” ಆಗಿದ್ದಾರೆ.