ಬಿಸಿಲಿನ ಧಗೆಗೆ ದೇಹವನ್ನು ತಂಪಾಗಿಡಲು ನೀರು ಅಥವಾ ತಂಪಾದ ಪಾನೀಯಗಳನ್ನ ಕುಡಿಯೋದು ಸಾಮಾನ್ಯ. ಆದ್ರೆ ಮದ್ಯ ಪ್ರಿಯರಿಗೆ ಅವರ ದೇಹವನ್ನ ತಂಪಾಗಿಡಲು ಚಿಲ್ಡ್ ಬಿಯರ್ ಬೇಕಂತೆ. ರಾಜ್ಯದಲ್ಲಿ ಸಾಮಾನ್ಯವಾಗಿ ದಿನದಲ್ಲಿ 10-15 ಬಾಕ್ಸ್ ಮಾರಾಟವಾಗುತಿತ್ತು. ಆದ್ರೆ ಇತ್ತೀಚೆಗೆ ಪ್ರತಿ ದಿನ 20ಕ್ಕೂ ಹೆಚ್ಚು ಬಾಕ್ಸ್ ಮಾರಾಟವಾಗುತ್ತಿದೆ. ಮದ್ಯ ಪ್ರಿಯರಂತು ಚಿಲ್ಡ್ ಬಿಯರ್ ಕುಡ್ದು ಫುಲ್ ಕೂಲ್ ಆಗಿದ್ದಾರೆ.
ರಮ್, ವಿಸ್ಕಿ ಸೇವನೆ ಮಾಡುತ್ತಿರುವ ಮದ್ಯ ಪ್ರಿಯರು ಸಹ ಈ ಬಿಸಿಲಿನ ತಾಪಕ್ಕೆ ಚಿಲ್ಡ್ ಬಿಯರ್ ಮೊರೆ ಹೋಗಿದ್ದಾರೆ. ಹಾಟ್ ಡ್ರಿಂಕ್ಸ್ ನಾ ಮಾರಾಟ ಕಮ್ಮಿ ಆಗಿದ್ದು, ಬಿಯರ್ ನ ಮಾರಾಟ ಹೆಚ್ಚಾಗಿದೆ. ಇದರಿಂದ ಬಿಯರ್ ಸೇವನೆಯ ಸಂಖ್ಯೆ ಹೆಚ್ಚಾಗಿದೆ.