ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಖದೀಮರು ಕಿಡ್ನ್ಯಾಪ್ ಮಾಡಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯ ಸ್ವಾಮಿ ಫ್ಲಾಟ್ನಲ್ಲಿ ನಡೆದಿತ್ತು. ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ವಿಜಯ್ ದಂಪತಿಯ ಮಕ್ಕಳಾದ ಸ್ವಸ್ತಿ ದೇಸಾಯಿ, ವಿಯೋಮ್ ದೇಸಾಯಿ ಅನ್ನು ಅಪಹರಿಸಿದ್ದರು.
ಇಬ್ಬರು ಮಕ್ಕಳು ಎಲ್ಕೆಜಿ ಶಾಲೆಗೆ ಹೋಗಿ ಮನೆಗೆ ಬಂದಿದ್ದರು. ಮನೆಯಲ್ಲಿ ಅಜ್ಜಿ ಮಾತ್ರ ಇರೋದನ್ನ ಗಮನಿಸಿದ ಖದೀಮರು ಕೃತ್ಯವೆಸಗಿದ್ದರು. ಮಕ್ಕಳನ್ನು ಅಪಹರಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು, ಅಥಣಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ..
ಹೌದು, ಮಕಳ್ಳ ಕಳ್ಳರ ಮೇಲೆ ಅಥಣಿ ಪೋಲಿಸರಿಂದ ಫೈರಿಂಗ್ ಆಗಿದೆ. ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದ ಹೊರವಲಯದಲ್ಲಿ ನಡೆದ ಅಪಹರಣ ಪ್ರಕರಣದ ತನಿಖೆಗೆ ಮೂರು ತಂಡಗಳನ್ನು ಮಾಡಿ ಪೊಲೀಸರು ಹುಡುಕಾಟ ನಡೆಸಿದ್ದರು.
ಕಳ್ಳರು ಕೋಹಳ್ಳಿ ಸಿಂಧೂರ ಮಾರ್ಗವಾಗಿ ಮಹಾರಾಷ್ಟ್ರಕ್ಕೆ ತೆರಳುವಾಗ ಪೊಲೀಸರ ತಂಡ ಅವರನ್ನ ಅಡ್ಡಗಟ್ಟಿತ್ತು. ಆ ಸಮಯದಲ್ಲಿ ಪೊಲಿಸರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ರು. ಆತ್ಮರಕ್ಷಣೆಗಾಗಿ ಮಕ್ಕಳ ಕಳ್ಳರ ಕಾಲಿಗೆ ಗಂಡೆಟು ಹೊಡೆದಿದ್ದಾರೆ ಪೊಲೀಸರು.
ನಂತರ ಕಳ್ಳರಿಂದ ಇಬ್ಬರು ಮಕ್ಕಳ ರಕ್ಷಣೆ ಮಾಡಲಾಗಿದೆ. ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡ ಅಥಣಿ ಪೊಲೀಸರು, ಆರೋಪಿ ಹಾಗೂ ಗಾಯಾಳನ್ನ ಅಥಣಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.