ಚೀನಾದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚೀನಾದ ದಕ್ಷಿಣ ಗುವಾಂಗ್ಡಾಂಗ್ ಪ್ರಾಂತ್ಯದಲ್ಲಿ ಹೆದ್ದಾರಿ ಕುಸಿದು 36 ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಕಾರುಗಳು ಉರುಳಿ ಬಿದ್ದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬುಧವಾರ ಮುಂಜಾನೆ 2 ಗಂಟೆ ಸುಮಾರಿಗೆ ಹೆದ್ದಾರಿಯ 17.9 ಮೀಟರ್ ಉದ್ದದ ಭಾಗವು ಕುಸಿದ ಕಾರಣ 23 ವಾಹನಗಳು ಸಿಲುಕಿದ್ದವು. ಗುವಾಂಗ್ಡಾಂಗ್ ಪ್ರಾಂತ್ಯದ ಕೆಲವು ಭಾಗಗಳಲ್ಲಿ ದಾಖಲೆಯ ಮಳೆಯಾಗಿದೆ. ಸ್ಥಳೀಯ ಅಧಿಕಾರಿಗಳು ಎಸ್ 12 ಹೆದ್ದಾರಿಯ ಭಾಗವನ್ನು ಎರಡೂ ದಿಕ್ಕುಗಳಲ್ಲಿ ಮುಚ್ಚುವ ಸೂಚನೆಯನನ್ನು ನೀಡಿದರು. ಪರ್ಯಾಯ ಮಾರ್ಗಗಳನ್ನು ಅನುಸರಿಸಲು ಚಾಲಕರಿಗೆ ಸೂಚಿಸಿಲಾಯಿತು.