ಸಾವನ್ನಪ್ಪಿದ ನಂತರ ಮಹಿಳೆಯೊಬ್ಬರು ಸುಮಾರು 14 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಿವೃತ್ತಿ ಪಡೆದ ಬಳಿಕವೂ ಕೆಲ ವರ್ಷ ಪಿಂಚಣಿಯನ್ನು ಪಡೆದುಕೊಂಡಿರುವ ಭಯಾನಕ ಘಟನೆಯೊಂದು ಚೀನಾದಲ್ಲಿ ಬೆಳಕಿಗೆ ಬಂದಿದೆ. 1993ರಲ್ಲಿ ಮಹಿಳೆಯೊಬ್ಬರು ಆಕ್ಸಿಡೆಂಟ್ ಆಗಿ ಸಾವನ್ನಪ್ಪುತ್ತಾರೆ. ಆದರೂ ಮಹಿಳೆ 2007ರವರೆಗೆ ಚೀನಾದ ವುಹಾನ್ ಕಾರ್ಖಾನೆಗೆ ಬಂದು ಕೆಲಸ ಮಾಡಿದ್ದಾಳೆ. 2007ರಲ್ಲಿ ನಿವೃತ್ತಿ ಹೊಂದಿದ ನಂತರ 2023ರವರೆಗೆ ಪ್ರತಿ ತಿಂಗಳು ಪಿಂಚಣಿಯನ್ನು ಪಡೆದುಕೊಂಡಿದ್ದಾರೆ. 2023ರವರಗೆ 393,676 ಯುವಾನ್ (ಅಂದಾಜು 46.21 ಲಕ್ಷ ರೂಪಾಯಿ) ಪಿಂಚಣಿ ತೆಗೆದುಕೊಂಡಿದ್ದಾರೆ. ಅದೇಗೆ ಸತ್ತ ಮಹಿಳೆ ಕೆಲಸ ಮಾಡಿ ಪಿಂಚಣಿ ಪಡೆಯುತ್ತಾರೆ ಅಂತ ನೀವು ತಲೆ ಕೆಡಿಸಿಕೊಂಡು ಕುತಿದ್ದೀರಾ ಅದಕ್ಕೆ ಉತ್ತರ ಇಲ್ಲಿದೆ ನೋಡಿ.
ಸಾವಿನ ನಂತರ ಯಾರಾದರೂ ಹೇಗೆ ಕೆಲಸ ಮಾಡಬಹುದು ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡುತ್ತದೆ. ಆದ್ರೆ ಇದು ದೆವ್ವ, ಭೂತದ ಕೆಲಸವಲ್ಲ. ಮೃತ ಮಹಿಳೆಯ ಸೋದರಿ ಮಾಡಿದ ದೊಡ್ಡ ವಂಚನೆ ಇದಾಗಿದೆ. ಉತ್ತರ ಚೀನಾದ ಇನ್ನರ್ ಮಂಗೋಲಿಯಾ ಸ್ವಾಯತ್ತ ಪ್ರದೇಶದ ವುಹೈನ್ ಅನ್ ಹೆಸರಿನ ಮಹಿಳೆ 1993ರಲ್ಲಿ ಕಾರ್ ಅಪಘಾತದಲ್ಲಿ ಸಾವನ್ನಪ್ಪುತ್ತಾರೆ. ಆದ್ರೆ ಆಕೆಯ ಸೋದರಿ ಈ ಸಾವನ್ನು ಮುಚ್ಚಿಡುತ್ತಾರೆ. ವುಹೈನ್ ಸತ್ತ ಬಳಿಕ ತಾನೇ ಅನ್ ಎಂದು ಪರಿಚಯ ಮಾಡಿಕೊಂಡು ಕಾರ್ಖಾನೆಗೆ ಬಂದು ಕೆಲಸ ಮಾಡಿದ್ದಾಳೆ.
ಸೋದರಿಯರು ನೋಡಲು ಒಂದೇ ರೀತಿ ಕಾಣುತ್ತಿದ್ದರೇ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಸೋದರಿ ಸಾವನ್ನಪ್ಪಿದ ಬಳಿಕ ಇಡೀ ಜೀವನವನ್ನು ಅನ್ ಹೆಸರಿನಲ್ಲಿ ಕಳೆದಿದ್ದಾಳೆ. ವುಹೈ ನಗರದ ಹೈಬೋವಾನ್ ಜಿಲ್ಲಾ ಪೀಪಲ್ಸ್ ಕೋರ್ಟ್ ಪ್ರಕಾರ, 2007ರಲ್ಲಿ ಸಹೋದರಿ ನಿವೃತ್ತಿಯಾಗುವವರೆಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ನಂತರ 2023ರ ವರೆಗೆ ಒಟ್ಟು 16 ವರ್ಷಗಳ ಕಾಲ ಸೋದರಿ ಅನ್ ಹೆಸರಲ್ಲಿ ಪಿಂಚಣಿಯನ್ನೂ ಪಡೆದಿದ್ದಳು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಕೊನೆಗೆ ಮಹಿಳೆಯೇ ತಪ್ಪೊಪ್ಪಿಕೊಂಡ ಬಳಿಕವೇ ಈ ಪ್ರಕರಣ ಬೆಳಕಿಗೆ ಬಂದಿದೆ. ತಪ್ಪೊಪ್ಪಿಕೊಂಡ ಮಹಿಳೆ ತಾನು ಪಡೆದಿರುವ ಸಂಬಳ ಹಾಗೂ ಪಿಂಚಣಿಯನ್ನು ಹಿಂದಿರುಗಿಸುವಾಗಿ ಒಪ್ಪಿಕೊಂಡಿದ್ದಾಳೆ. ತಪ್ಪೊಪ್ಪಿಕೊಂಡ ಕಾರಣದಿಂದ ನ್ಯಾಯಾಲಯ ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆ 25,000 ಯುವಾನ್ ( 2.92 ಲಕ್ಷ ರೂಪಾಯಿ) ದಂಡ ವಿಧಿಸಿ ಆದೇಶ ನೀಡಿದೆ. ಅಂತಿಮವಾಗಿ ನ್ಯಾಯಾಲಯ ಜೈಲು ಶಿಕ್ಷೆಯನ್ನು ಮತ್ತೊಂದು ವರ್ಷ ವಿಸ್ತರಿಸಿದೆ.
ಏನೇ ಆಗಲಿ ಅನ್ ಮಾಡಿದ ತಪ್ಪು ಒಂದೇ ಅದು ತನ್ನ ಗುರುತು ಮರೆ ಮಾಡಿ ಕೆಲಸಕ್ಕೆ ಸೇರಿರೋದು. ವಯಸ್ಸಾದ ನಂತರ ಮಹಿಳೆ ಏಕೆ ಪಿಂಚಣಿ ಪಡೆಯಬಾರದು? ಕೆಲವರು ಅಧಿಕೃತವಾಗಿ ಕೆಲಸ ಪಡೆದುಕೊಂಡಿದ್ರೂ ಕೆಲಸ ಮಾಡಲ್ಲ. ಅಂತಹವರ ಮಧ್ಯೆ ಪ್ರಾಮಾಣಿಕವಾಗಿ ಅನ್ ಕೆಲಸ ಮಾಡಿದ್ದಾಳೆ. ಆದ್ದರಿಂದ ಮಹಿಳೆ ಶಿಕ್ಷೆಯ ಪ್ರಮಾಣ ಕಡಿತಗೊಳಿಸಬೇಕು ಅಂತಾ ಸಾಮಾಜಿಕ ಜಾಲತಾಣದಲ್ಲಿ ಜನ ಚರ್ಚೆ ಮಾಡುತ್ತಿದ್ದಾರೆ.