- ರೇಣುಕಾಸ್ವಾಮಿ ಕುಟುಂಬಕ್ಕೆ ಫಿಲ್ಮ್ ಚೆಂಬರ್ನಿಂದ 5 ಲಕ್ಷ ರೂ. ಪರಿಹಾರ
- ₹ 2 ಲಕ್ಷ ಪರಿಹಾರ ನೀಡಿದ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ
ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 16 ಮಂದಿ ಬಂಧನವಾಗಿದೆ. ಈ ಕೊಲೆ ಪ್ರಕರಣ ತನಿಖೆ ಮುಂದುವರೆದಿದೆ. ಪೊಲೀಸರು ಪ್ರಕರಣದ ಸಾಕ್ಷಿ ಸಂಗ್ರಹದಲ್ಲಿ ತೊಡಗಿದ್ದಾರೆ. ಆದರೆ ಮಗನನ್ನು ಕಳೆದಕೊಂಡ ತಂದೆ- ತಾಯಿ ಹಾಗೂ ಪತ್ನಿ ಕಂಗಾಲಾಗಿದ್ದಾರೆ. ರೇಣುಕಾಸ್ವಾಮಿ ನಿವಾಸಕ್ಕೆ ಫಿಲ್ಮ್ ಚೆಂಬರ್ ತಂಡ ಭೇಟಿ ನೀಡಿದ್ದು, ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಧೈರ್ಯ ತುಂಬಿ, ವಾಣಿಜ್ಯ ಮಂಡಳಿಯಿಂದ 5 ಲಕ್ಷ ರೂ. ಪರಿಹಾರ ನೀಡಲಾಯಿತು. ಮುಂದೆ ಕುಟುಂಬಕ್ಕೆ ಯಾವ ರೀತಿ ಸಹಾಯ ಮಾಡಬೇಕು ಅನ್ನೊದನ್ನ ನೋಡಿಕೊಂಡು ಶಾಶ್ವತ ಪರಿಹಾರ ಕೊಡಿಸುವ ಭರವಸೆಯನ್ನು ಚೇಂಬರ್ ಅಧ್ಯಕ್ಷರು ನೀಡಿದರು.
₹ 2 ಲಕ್ಷ ಪರಿಹಾರ ನೀಡಿದ ಶಾಸಕ ವಿರೇಂದ್ರ ಪಪ್ಪಿ
ಇಂದು ರೇಣುಕಾಸ್ವಾಮಿ ನಿವಾಸಕ್ಕೆ ಕಾಂಗ್ರೆಸ್ ಶಾಸಕ ವಿರೇಂದ್ರ ಪಪ್ಪಿ ಭೇಟಿ ನೀಡಿ ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ರೇಣುಕಾಸ್ವಾಮಿ ಮನೆಗೆ ಭೇಟಿ ನೀಡಿದ ಶಾಸಕ, ರೇಣುಕಾಸ್ವಾಮಿ ಫೋಟೋಗೆ ಹಾರ ಹಾಕಿ ಸ್ವಾಂತ್ವಾನ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೃತ ರೇಣುಕಾಸ್ವಾಮಿ ಕುಟುಂಬಕ್ಕೆ ವೈಯಕ್ತಿಕವಾಗಿ ವಿರೇಂದ್ರ ಪಪ್ಪಿ ಎರಡು ಲಕ್ಷ ಪರಿಹಾರ ನೀಡಿದ್ದಾರೆ. ಚೀಟಿಯಲ್ಲಿ ಇವರಿಗೆ 2 ಲಕ್ಷ ಕೊಡಿ ಎಂದು ಸಹಿ ಮಾಡಿ ಕೊಟ್ಟಿದ್ದಾರೆ.