ವರ್ಷಾಂತ್ಯದ ಈ ರಜಾ ದಿನಗಳಲ್ಲಿ ಪ್ರವಾಸೋದ್ಯಮ ಗರಿಗೆದರಿದ್ದು, ವಾರಾಂತ್ಯದಲ್ಲಿ ಭಾರತೀಯ ತಾಣಗಳು ಪ್ರವಾಸಿಗರಿಂದ ತುಂಬಿವೆ. ಕ್ರಿಸ್ಮಸ್ ಸಮಯದಲ್ಲಿ ಭಾರತದ ಹಲವು ರಾಜ್ಯಗಳು ಸಡಗರದಿಂದ ಅಲಂಕಾರಗೊಳ್ಳುತ್ತವೆ. ಸ್ಥಳೀಯ ಪ್ರಾಕೃತಿಕ ಆಕರ್ಷಣೆ ಜತೆಗೆ ಕ್ರಿಸ್ ಮಸ್ ಅಲಂಕಾರವೂ ಸೇರಿ ಊರಿಗೇ ಊರು ಸಿಂಗಾರಗೊಂಡು ಪ್ರವಾಸಿಗರನ್ನು ಸೆಳೆಯುತ್ತವೆ. ಅಂತಹ ಕೆಲವು ತಾಣಗಳ ವಿವರ ಇಲ್ಲಿದೆ.
ಶಿಲ್ಲಾಂಗ್: ಶಿಲ್ಲಾಂಗ್ ಅನ್ನು ಭಾರತದ ಸ್ಕಾಟ್ಲೆಂಡ್ ಎಂದು ಕರೆಯಲಾಗುತ್ತದೆ. ಇದು ಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಶಿಲ್ಲಾಂಗ್ನ ಪ್ರಾಕೃತಿಕ ಸೌಂದರ್ಯದ ನಡುವೆ ಕ್ರಿಸ್ಮಸ್ ಆಚರಿಸುವುದು ಒಂದು ವಿಶಿಷ್ಟ ಅನುಭವವೇ ಸರಿ.
ಮುಂಬೈ: ಭಾರತದ ವಾಣಿಜ್ಯ ನಗರಿ ಇದು. ಇಲ್ಲಿ ಕ್ರಿಸ್ಮಸ್ ಅನ್ನು ಆಕರ್ಷಕವಾಗಿ ಆಚರಿಸಲಾಗುತ್ತದೆ. ಮುಂಬಯಿಯಲ್ಲಿ ಅನೇಕ ಚರ್ಚುಗಳು, ಬೀದಿಗಳಲ್ಲಿನ ಬೆಳಕು ಮತ್ತು ರಾತ್ರಿ ಜೀವನವನ್ನು ಅನುಭವಿಸಬಹುದು.
ದಮನ್ ಮತ್ತು ದಿಯು: ಪೋರ್ಚುಗೀಸ್ರ ಆಳ್ವಿಕೆಯ ಕುರುಹು ದಮನ್ ಮತ್ತು ದಿಯುವಿನಲ್ಲಿ ಕಂಡುಬರುತ್ತದೆ. ಕ್ರಿಸ್ಮಸ್ ಸಮಯದಲ್ಲಿ ಇಲ್ಲಿನ ಆಚರಣೆಗಳು ಬಹಳ ವಿಶಿಷ್ಟವಾಗಿರುತ್ತವೆ.
ಶಿಮ್ಲಾ: ಹಿಮಾಲಯದ ರಾಣಿ ಎಂದು ಕರೆಯಲ್ಪಡುವ ಶಿಮ್ಲಾ ಕ್ರಿಸ್ಮಸ್ ಸಮಯದಲ್ಲಿ ಬಹಳ ಸುಂದರವಾಗಿರುತ್ತದೆ. ಇಲ್ಲಿನ ಸುಂದರ ಹಿಮ ಪರಿಸರದ ನಡುವೆ ಕ್ರಿಸ್ಮಸ್ ಆಚರಣೆ ಆಕರ್ಷಕ.
ಉದಯಪುರ: ರಾಜಸ್ಥಾನದ ಈ ನಗರವು ಕ್ರಿಸ್ಮಸ್ ಸಮಯದಲ್ಲಿ ವಿಭಿನ್ನವಾದ ಅನುಭವವನ್ನು ನೀಡುತ್ತದೆ. ಸರೋವರಗಳಿಂದ ತುಂಬಿರುವ ಉದಯಪುರ ಪ್ರವಾಸಿಗರ ಸ್ವರ್ಗ, ರಾಜಸ್ಥಾನಿ ಸಂಸ್ಕೃತಿಯ ಸವಿಯನ್ನು ಇದು ಉಣಬಡಿಸುತ್ತದೆ.