ಜಿಮ್ ಟ್ರೈನರ್ ಪ್ರಶಾಂತ್ ಮೇಲೆ ಹಲ್ಲೆ ನಡೆದಿದ್ದು, ಬೆಂಗಳೂರಿನ ಬನಶಂಕರಿಯ ಕೆ ಆರ್ ರಸ್ತೆಯಲ್ಲಿ ಹಲ್ಲೆ ಆಗಿದೆ. ಹಲ್ಲೆ ಬಗ್ಗೆ ಬನಶಂಕರಿ ಪೊಲೀಸರಿಗೆ ಪ್ರಶಾಂತ್ ಮಾಹಿತಿ ನೀಡಿದ್ದಾರೆ. ಈ ಘಟನೆಯ ಬಗ್ಗೆ ನಟ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದು, ಅವರ ಪರ್ಸನಲ್ ವಿಚಾರಕ್ಕೆ ಹಲ್ಲೆಯಾಗಿದೆ. ಯಾರೋ ಬಂದು ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಯಾರು ಅಂತಾ ಗೊತ್ತಿಲ್ಲಾ ಇನ್ನೂ ತನಿಖೆ ನಡೆಯುತ್ತಿದೆ. ಅಕ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಘಟನೆ ಬಗ್ಗೆ ಎಫ್ಐಆರ್ ಆಗಿದೆ. ಕಾನೂನು ರೀತಿಯಲಲಿ ತನಿಖೆ ನಡೆಯುತ್ತೆ ಎಂದು ನಟ ಧ್ರುವ ಸರ್ಜಾ ಹೇಳಿದ್ದಾರೆ.