ಕನ್ನಡದಲ್ಲಿ ಮೋಡಿ ಮಾಡಿದ “777 ಚಾರ್ಲಿ“ ಸಿನಿಮಾ ಈಗ ಬೇರೆ ಬೇರೆ ಭಾಷೆಯಲ್ಲೂ ಬಿಡುಗಡೆ ಕಂಡು ಮೆಚ್ಚುಗೆಗೆ ಪಾತ್ರವಾಗಿದೆ. ಪ್ರಾಣಿಪ್ರಿಯರಂತೂ ಈ ಸಿನಿಮಾ ನೋಡಿ ಖುಷಿಪಟ್ಟಿದ್ದಾರೆ. ಚಾರ್ಲಿ ಸಿನಿಮಾದಲ್ಲಿ ನಟಿಸಿದ ರಕ್ಷಿತ್ ಶೆಟ್ಟಿ ಅಭಿನಯಕ್ಕೆ ಅಭಿಮಾನಿಗಳು ಬೇಷ್ ಎಂದಿದ್ದರು. “ಪರಂವಃ ಸ್ಟುಡಿಯೋಸ್” ಮೂಲಕ ನಿರ್ಮಾಣವಾದ “777 ಚಾರ್ಲಿ” ಸಿನಿಮಾ ತಂಡದಿಂದ ವಿಶೇಷ ಸುದ್ದಿ ಕೇಳಿಬಂದಿದೆ. ಜಪಾನ್ನಲ್ಲಿ ಈ ಚಿತ್ರ ಬಿಡುಗಡೆಯಾಗಲು ಸಿದ್ಧವಾಗಿದೆ. ಕನ್ನಡದ ಈ ಸಿನಿಮಾ ಜಪಾನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆ ಆಗುತ್ತಿದೆ. ಜೂನ್ 28ರಂದು ಜಪಾನ್ ದೇಶದ ಹಲವು ನಗರಗಳಲ್ಲಿ “777 ಚಾರ್ಲಿ” ರಿಲೀಸ್ ಆಗಲಿದೆ.
ಬಾಲಿವುಡ್ ಹಾಗೂ ಟಾಲಿವುಡ್ನ ಹಲವು ಸಿನಿಮಾಗಳು ಜಪಾನ್ನಲ್ಲಿ ಬಿಡುಗಡೆ ಆಗಿ ಯಶಸ್ಸು ಕಂಡಿತ್ತು. ಆದ್ರೆ ಈಗ ಕನ್ನಡದ ಒಂದು ಸಿನಿಮಾ ಜಪಾನ್ನಲ್ಲಿ ತೆರೆ ಕಾಣಲು ಸಜ್ಜಾಗಿರುವುದು ಹೆಮ್ಮೆಯ ವಿಷಯ. ಜಪಾನ್ ಚಿತ್ರರಂಗದ ದೊಡ್ಡ ಸಂಸ್ಥೆ “ಶೋಚಿಕೋ ಮೂವೀ” ಕಿರಣ್ ರಾಜ್ ನಿರ್ದೇಶನದ “777 ಚಾರ್ಲಿ” ಚಿತ್ರವನ್ನು ಜಪಾನಿನಲ್ಲಿ ವಿರತಣೆ ಮಾಡಲು ಮುಂದಾಗಿದೆ.
2023ರಲ್ಲಿ 777 ಚಾರ್ಲಿ ಸಿನಿಮಾ ಥೈಲ್ಯಾಂಡ್ನಲ್ಲಿ ಡಬ್ ಆಗಿ ತೆರೆಕಂಡಿತ್ತು. ಈ ಸಿನಿಮಾ ಮುಂದಿನ ದಿನಗಳಲ್ಲಿ ರಷ್ಯಾ, ಲ್ಯಾಟಿನ್, ಅಮೆರಿಕಾ, ಜರ್ಮನಿ, ತೈವಾನ್ ಮುಂತಾದ ದೇಶಗಲ್ಲಿ ಬಿಡುಗಡೆ ಆಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.