- ಈಗ ಉಪ್ಪಿ ನಟನೆಯ ಕಲ್ಟ್ ಸಿನಿಮಾ ಮತ್ತೆ ರಿಲೀಸ್ ಆಗ್ತಾಯಿದೆ.
- 1998 ರಲ್ಲಿ ಈ ಸಿನಿಮಾ ಮೊದಲ ಬಾರಿಗೆ ರಿಲೀಸ್ ಆಗಿತ್ತು.
- 1 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸುಮಾರು 20 ಕೋಟಿ ಗಳಿಕೆ ಮಾಡಿತ್ತು.
ಇತ್ತೀಚೆಗೆ ಸಿನಿ ದುನಿಯಾದಲ್ಲಿ ಹೊಸ ಟ್ರೆಂಡ್ ಶುರುವಾಗಿದೆ. ಸ್ಟಾರ್ ನಟರ ಸಿನಿಮಾಗಳನ್ನ ಮರು ಬಿಡುಗಡೆ ಮಾಡುವುದೇ ಟ್ರೆಂಡ್ ಆಗಿದೆ. ಜಮಾನದಲ್ಲಿ ಸೂಪರ್ ಹಿಟ್ ಆದ ಸಿನಿಮಾಗಳನ್ನ ರಿ ರಿಲೀಸ್ ಮಾಡಿ ಭರ್ಜರಿ ಕಮಾಯಿಯನ್ನ ನಿರ್ಮಾಪಕರು ಮಾಡುತ್ತಿದ್ದಾರೆ.
ಇನ್ನೂ ಈಗ ಲೋಕಸಭೆ ಚುನಾವಣೆಯಿಂದಾಗಿ ಹೊಸ ಸಿನಿಮಾಗಳನ್ನ ರಿಲೀಸ್ ಮಾಡಲು ನಿರ್ಮಾಪಕರು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಮತ್ತೆ ಹಳೆ ಸಿನಿಮಾ ರಿಲೀಸ್ ಮಾಡೋಕೆ ನಿರ್ಮಾಪಕರು ಹಾಗೂ ವಿತರಕರು ಮುಂದಾಗಿದ್ದಾರೆ. ಮೆ 10ರಂದು ಅಪ್ಪು ನಟಿಸಿದ್ದ ಎರಡು ಸಿನಿಮಾಗಳು ರಿಲೀಸ್ ಆಗಿದ್ವು..ಈಗ ಉಪ್ಪಿ ನಟನೆಯ ಕಲ್ಟ್ ಸಿನಿಮಾ ಮತ್ತೆ ರಿಲೀಸ್ ಆಗ್ತಾಯಿದೆ.
ಉಪೇಂದ್ರ ಮೊದಲ ಬಾರಿಗೆ ನಾಯಕ ನಟನಾಗಿ ನಟಿಸಿ, ನಿರ್ದೇಶನವನ್ನೂ ಮಾಡಿದ್ದ ‘ಎ’ ಸಿನಿಮಾವನ್ನು ಇದೀಗ ಮತ್ತೆ ರಿಲೀಸ್ ಆಗ್ತಾಯಿದೆ. 1998 ರಲ್ಲಿ ಈ ಸಿನಿಮಾ ಮೊದಲ ಬಾರಿಗೆ ರಿಲೀಸ್ ಆಗಿತ್ತು. ಆ ವರೆಗೆ ಕೇವಲ ನಿರ್ದೇಶಕನಾಗಿ ಹಾಗೂ ಸಣ್ಣ ಪುಟ್ಟ ಪಾತ್ರಗಳನ್ನ ಮಾಡುತ್ತಿದ್ದ ಉಪ್ಪಿ ಈ ಸಿನಿಮಾ ಮೂಲಕ ಮೊದಲ ಬಾರಿಗೆ ನಾಯಕ ನಟರಾದರು. ಇದೀಗ ಈ ಸಿನಿಮಾ ಮೇ 17 ರಂದು ಮತ್ತೆ ರಿಲೀಸ್ ಆಗ್ತಾಯಿದೆ.
ಸಿನಿಮಾದ ಸಿದ್ದ ಸೂತ್ರಗಳ ಪದ್ಧತಿಯನ್ನ ಹೊಡೆದು ಹಾಕಿದ್ದ ಉಪೇಂದ್ರ ‘ಎ ಸಿನಿಮಾ ಮೂಲಕ ಹೊಸ ಬಗೆಯ ಟ್ರೆಂಡ್ ಸೃಷ್ಟಿ ಮಾಡಿದ್ರು. ಈ ಸಿನಿಮಾದ ಹಾಡುಗಳು ಸಹ ಎವರ್ಗ್ರೀನ್. ಈ ಸಿನಿಮಾದ ಅಭಿಮಾನಿಗಳು ದೊಡ್ಡ ಸಂಖ್ಯೆಯಲ್ಲಿದ್ದು ಅದನ್ನೇ ಎನ್ಕ್ಯಾಶ್ ಮಾಡಿಕೊಳ್ಳುವ ಉದ್ದೇಶದಿಂದ ‘ಎ’ಸಿನಿಮಾವನ್ನು ಈಗ ಮರು ಬಿಡುಗಡೆ ಮಾಡಲಾಗುತ್ತಿದೆ.
ಆಗ ಸಿನಿಮಾವನ್ನ ಯಶ್ ರಾಜ್ ಎಂಬುವರು ವಿತರಣೆ ಮಾಡಿದ್ದರು. ಕೇವಲ 1 ಕೋಟಿ ಬಜೆಟ್ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸುಮಾರು 20 ಕೋಟಿ ಗಳಿಕೆ ಮಾಡಿತ್ತು ಎಂಬುದು ವಿಕಿಪೀಡಿಯಾದಲ್ಲಿರೋ ಮಾಹಿತಿ ಈಗ ರಿ ರಿಲೀಸ್ ನಲ್ಲಿ ಎಷ್ಟು ಕಮಾಯಿ ಮಾಡುತ್ತೋ ಕಾದು ನೋಡಬೇಕಿದೆ…