- ಅಭಿಷೇಕ್ ಅಂಬರೀಶ್ – ಅವಿವಾ ಬಿದ್ದಪ್ಪ ಜೋಡಿಗೆ ವಿವಾಹ ವಾರ್ಷಿಕೋತ್ಸವ
- ಮಗ-ಸೊಸೆಗೆ ಸ್ಪೆಷಲ್ಲಾಗಿ ವಿಶ್ ಮಾಡಿದ ಸುಮಲತಾ ಅಂಬರೀಷ್
ಮರಿ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಜೋಡಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಮೊದಲನೇ ವರ್ಷದ ವೆಡ್ಡಿಂಗ್ ಆನಿವರ್ಸರಿ ಖುಷಿಯಲ್ಲಿರುವ ಈ ಕ್ಯೂಟ್ ಕಪಲ್ಸ್ಗೆ ಫ್ಯಾಮಿಲಿ, ಫ್ರೆಂಡ್ಸ್ ಜೊತೆಗೆ ಅಭಿಮಾನಿ ದೇವರುಗಳು ಕೂಡ ಸೋಷಿಯಲ್ ಮೀಡಿಯಾ ಮೂಲಕ ಶುಭಕೋರುತ್ತಿದ್ದಾರೆ.
ಮಗ-ಸೊಸೆಗೆ ಸಂಸದೆ ಕಂ ನಟಿ ಸುಮಲತಾ ಅಂಬರೀಷ್ ಸ್ಪೆಷಲ್ಲಾಗಿ ವಿಶ್ ಮಾಡಿದ್ದಾರೆ. ಅಭಿಷೇಕ್ ಹಾಗೂ ಅವಿವಾ ಕೂಡ ಪರಸ್ಪರ ವಿಶ್ ಮಾಡ್ಕೊಂಡು ವೆಡ್ಡಿಂಗ್ ಆನಿವರ್ಸರಿನಾ ಸ್ಪೆಷಲ್ಲಾಗಿಸಿಕೊಳ್ತಿದ್ದಾರೆ. ಹ್ಯಾಪಿ ಆ್ಯನಿವರ್ಸರಿ ಸ್ವೀಟ್ ಹಾರ್ಟ್ ಎಂದು ಅಭಿಷೇಕ್ ವಿಶ್ ಮಾಡಿದರೆ, ಹ್ಯಾಪಿ ಒನ್ ಮೈ ಲವ್ ಎಂದು ಅವಿವಾ ಶುಭಕೋರಿದ್ದಾರೆ.
ಇನ್ನೂ ಅಭಿಷೇಕ್ ಹಾಗೂ ಅವಿವಾ ಜೋಡಿ ಕಳೆದ ವರ್ಷ ಜೂನ್ 05ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಂಬರೀಶ್ ಹಾಗೂ ಸುಮಲತಾರ ಏಕಮಾತ್ರ ಪುತ್ರನ ಮದುವೆ ಅವಿವಾ ಜೊತೆ ಅದ್ಧೂರಿಯಾಗಿ ನೆರವೇರಿತ್ತು. ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಸೌತ್ ಸಿನಿಮಾ ಇಂಡಸ್ಟ್ರಿಯ ಅನೇಕ ಸ್ಟಾರ್ ನಟ- ನಟಿಯರು ಮದುವೆಯಲ್ಲಿ ಪಾಲ್ಗೊಂಡಿದ್ದರು.
ಅಭಿಷೇಕ್ ಹಾಗೂ ಅವಿವಾರದ್ದು ಲವ್ ಕಂ ಅರೇಂಜ್ ಮ್ಯಾರೇಜ್. ಲಂಡನ್ ನಲ್ಲಿ ಓದುವಾಗ ಪರಿಚಯಗೊಂಡ ಇವರಿಬ್ಬರು ಆರಂಭದಲ್ಲಿ ಸ್ನೇಹಿತರಾಗಿ ನಂತರ ಪ್ರೇಮಿಗಳಾದರು. ಅವರ ಪ್ರೀತಿಗೆ ಕಳೆದ ವರ್ಷ ದಾಂಪತ್ಯದ ಮುದ್ರೆ ಹೊತ್ತಿದ್ದ ಈ ಜೋಡಿ ಇವತ್ತು ಚೊಚ್ಚಲ ವಾರ್ಷಿಕೋತ್ಸವ ಆಚರಿಸಿಕೊಳ್ತಿದೆ. ಇನ್ನೂ ಕಳೆದ ವರ್ಷ ಬ್ಯಾಡ್ ಮ್ಯಾನರ್ ಆಗಿ ಅಭಿಮಾನಿಗಳ ಮುಂದೆ ಬಂದಿದ್ದ ಮರಿ ರೆಬೆಲ್ ಸ್ಟಾರ್ ಈ ವರ್ಷ ಕಾಳಿಯಾಗಿ ಎಂಟ್ರಿಕೊಡಲು ಸಿದ್ದತೆ ನಡೆಸಿದ್ದಾರೆ. ಇದರ ಜೊತೆಗೆ ಅಯೋಗ್ಯ ಮಹೇಶ್ ಹಾಗೂ ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾಗೂ ಸೈನ್ ಮಾಡಿದ್ದಾರೆ.