ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ದಾಂಪತ್ಯ ವಿಚಾರ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಿದೆ. ಇವರು ವಿಚ್ಛೇದನ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡರು ಎಂದು ಇತ್ತೀಚೆಗೆ ವರದಿ ಆಗಿತ್ತು. ಈ ಗುಮಾನಿ ಹುಟ್ಟಲು ಕಾರಣ ಆಗಿದ್ದು ಅನಂತ್ ಅಂಬಾನಿ ಮದುವೆ ದಿನ ನಡೆದ ಘಟನೆ. ಈ ವಿವಾಹ ಸಮಾರಂಭಕ್ಕೆ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಒಟ್ಟಾಗಿ ಬಂದರೆ, ಅಮಿತಾಭ್, ಅಭಿಷೇಕ್, ಜಯಾ ಪ್ರತ್ಯೇಕವಾಗಿ ಬಂದಿದ್ದರು. ಈ ಕಾರಣದಿಂದ ಇವರ ವಿಚ್ಛೇದನ ಸುದ್ದಿ ಹರಿದಾಡಿತ್ತು. ಈಗ ಅಭಿಷೇಕ್ ಬಚ್ಚನ್ ಅವರು ಐಶ್ವರ್ಯಾ ರೈಗೆ ಕಾರು ಗಿಫ್ಟ್ ನೀಡುವರೇ ಎಂದು ಪ್ರಶ್ನೆ ಮೂಡಿದೆ.
ವರದಿಗಳ ಪ್ರಕಾರ ಅಭಿಷೇಕ್ ಬಚ್ಚನ್ ಅವರು ಹೊಸ ಕಾರು ಖರೀದಿ ಮಾಡಿದ್ದಾರೆ. ಸೋದರಳಿಯ ಅಗಸ್ತ್ಯ ನಂದಾ, ಸೊಸೆ ನವ್ಯಾ ನವೇಲಿ ನಂದಾ ಮತ್ತು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಅವರನ್ನು ಅಭಿಷೇಕ್ ಹೊಸ ಕಾರಿನಲ್ಲಿ ಡಿನ್ನರ್ಗೆ ಕರೆದುಕೊಂಡು ಹೋಗಿದ್ದಾರೆ. ಆಗ ಹಲವರ ಗಮನ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ನಂಬರ್ ಪ್ಲೇಟ್ ಕಡೆಗೆ ಹೋಗಿದೆ. ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನೇ ಅಭಿಷೇಕ್ ತಮ್ಮ ಕಾರಿನ ನಂಬರ್ ಪ್ಲೇಟ್ ಮಾಡಿಕೊಂಡಿದ್ದಾರೆ.
ಐಶ್ವರ್ಯಾ ರೈ ಬಳಿ ‘Mercedes-Benz S-Class’ ಕಾರು ಇತ್ತು. ಅದನ್ನು ಈಗ ಮಾರಾಟ ಮಾಡಲಾಗಿದೆ. ಈ ಕಾರಿನ ಸಂಖ್ಯೆ 5050 ಆಗಿತ್ತು. ಈಗ ಅಭಿಷೇಕ್ ಬಚ್ಚನ್ ಅವರ ಹೊಸ ಕಾರಿನ ಸಂಖ್ಯೆ ಕೂಡ 5050 ಆಗಿದೆ. ಹೀಗಾಗಿ, ಕೆಲವರು ಅಭಿಷೇಕ್ ಅವರು ಐಶ್ವರ್ಯಾಗೆ ಕಾರು ಗಿಫ್ಟ್ ಮಾಡಿದ್ದಾರೆ ಎಂದಿದ್ದಾರೆ. ಇನ್ನೂ ಕೆಲವರು ಅಭಿಷೇಕ್ ಅವರು ಐಶ್ವರ್ಯಾ ಅವರ ಫೇವರಿಟ್ ಸಂಖ್ಯೆಯನ್ನು ತಮ್ಮ ಕಾರಿನ ಸಂಖ್ಯೆಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಮಾತನಾಡಿದ್ದಾರೆ.