ಆ್ಯಪಲ್ ಕಂಪನಿಯ ಪ್ರಾಡಕ್ಟ್ ಬಳಸೋದು ಹಲವರಿಗೆ ಹೆಮ್ಮೆಯ ವಿಚಾರ. ಈಗ ಇದೇ ಆಪ್ಯಲ್ ಐಪ್ಯಾಡ್ ಆ್ಯಡ್ ಬಗ್ಗೆ ನಟ ಹೃತಿಕ್ ರೋಷನ್ ಆಕ್ರೋಶ ಹೊರ ಹಾಕಿದ್ದಾರೆ.
ಕೆಲ ದಿನಗಳ ಹಿಂದೆ ಆ್ಯಪಲ್ ಹೊಸ ಐಪ್ಯಾಡ್ನ ಜಾಹೀರಾತನ್ನ ರಿಲೀಸ್ ಮಾಡಿತ್ತು. ‘ಐಪ್ಯಾಡ್ ಪ್ರೋʼ ಎಷ್ಟು ಪವರ್ಫುಲ್ ಆಗಿದೆ ಅನ್ನೋದನ್ನ ಹೇಳುವುದಕ್ಕಾಗಿ. ಪುಸ್ತಕಗಳು, ಸಂಗೀತ ಸಾಧನಗಳು, ಟಿವಿ, ಗ್ರಾಮೋಫೋನ್, ಗೊಂಬೆ, ಪೇಂಟಿಂಗ್ಸ್, ಸ್ಪೀಕರ್, ಕ್ಯಾಮೆರಾ ಮುಂತಾದ ವಸ್ತುಗಳನ್ನ ದೊಡ್ಡ ಕ್ರಶರ್ ಮೂಲಕ ನಾಶಪಡಿಸುವ ದೃಶ್ಯ ಜಾಹಿರಾತಿನಲ್ಲಿದೆ.
ಆ ಎಲ್ಲ ಸಾಧನಗಳ ಕೆಲಸವನ್ನ ಕೇವಲ ಒಂದು ಐಪ್ಯಾಡ್ ಮಾಡುತ್ತದೆ ಅಂತ ಗ್ರಾಹಕರಿಗೆ ತಿಳಿಸುವುದು ಈ ಜಾಹೀರಾತಿನ ಉದ್ದೇಶ. ಈ ಜಾಹಿರಾತನ್ನ ನೋಡಿದ ಹೃತಿಕ್ ರೋಷನ್ ಆಕ್ರೋಶ ಹೊರ ಹಾಕಿದ್ದಾರೆ. ಈ ಜಾಹಿರಾತು ಬಹಳ ದುಖಃ ಮತ್ತು ಅಜ್ಞಾನದಿಂದ ಕೂಡಿದೆ ಅಂತ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ ನಲ್ಲಿ ಬರೆದುಕೊಂಡು ಆಕ್ರೋಶ ಹೊರ ಹಾಕಿದ್ದಾರೆ. ಈಜಾಹಿರಾತಿಗೆ ಭಾರತದ ಸೆಲೆಬ್ರಿಟಿಗಳು ಮಾತ್ರವಲ್ಲದೇ ವಿದೇಶದ ಸೆಲೆಬ್ರಿಟಿಗಳು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.