ಮಹದೇವ್ ಬೆಟ್ಟಿಂಗ್ ಆ್ಯಪ್ ಪ್ರರಕಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ನಟ ಸಾಹಿಲ್ ಖಾನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಛತ್ತೀಸ್ಗಢದಲ್ಲಿ ಮುಂಬೈ ಸೈಬರ್ ಸೆಲ್ನ ವಿಶೇಷ ತನಿಖಾ ತಂಡ ನಟನನ್ನು ಬಂಧಿಸಿದ್ದು, ಬಾಂಬೆ ಹೈಕೋರ್ಟ್ ಪೂರ್ವ ಬಂಧನದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
2023ರ ಡಿಸೆಂಬರ್ನಲ್ಲಿ ಸಾಹಿಲ್ ಮತ್ತು ಇದೇ ಪ್ರಕರಣಕ್ಕೆ ಸಂಬಂಧಿಸಿದ ಇನ್ನುಳಿದ ಮೂವರನ್ನು ವಿಶೇಷ ತನಿಖಾ ತಂಡ ವಿಚಾರಣೆಗೆ ಕರೆದಿತ್ತು. ಆದರೆ ಅವರು ಹಾಜರಾಗಲಿಲ್ಲ. ತಾವು ಕೇವಲ ಬ್ರ್ಯಾಂಡ್ ಪ್ರಮೋಟರ್ ಎಂದು ಹೇಳಿಕೊಂಡಿದ್ದರು. ಪೊಲೀಸರು ಸಾಹಿಲ್ ಅವರು ಆ್ಯಪ್ ನ ಸಹ ಮಾಲೀಕರಾಗಿದ್ದರು ಎಂದು ಹೇಳಿದ್ದಾರೆ. ನಟ ಬೆಟ್ಟಿಂಗ್ ಆ್ಯಪ್ ಸಂಬಂಧಿಸಿದ ಪ್ರಚಾರದ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲು ತಿಂಗಳಿಗೆ 3 ಲಕ್ಷ ಹಣ ಪಡೆದುಕೊಳ್ಳುತ್ತಿದ್ದರು.
ನಟ 24 ತಿಂಗಳುಗಳ ಕಾಲ ಈ ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಇದರ ಹೊರತಾಗಿಯೂ ಕಾನೂನುಬಾಹಿರ ಕಾರ್ಯಾಚರಣೆಯಲ್ಲಿ ನೇರವಾಗಿ ಭಾಗಿಯಾಗಿರುವುದನ್ನು ಉಲ್ಲೇಖಿಸಿ ನ್ಯಾಯಾಲಯವು ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು.