ಜೂನ್ 5 ಪರಿಸರ ದಿನಾಚರಣೆ ದಿನದಂದು ಅನೇಕರು ಗಿಡಗಳನ್ನು ನೆಡುತ್ತಾರೆ. ಇನ್ನ ಕೆಲವರು ಪರಿಸರವನ್ನು ಸ್ವಚ್ಛಗೊಳಿಸಿದ್ದಾರೆ. ಇದೇ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಮುಂಬೈನ ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದಾರೆ.
ಬಾಲಿವುಡ್ ನಟಿ ಜಾಕ್ವೆಲಿನ್ ಅವರು ಆಗಾಗ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಈದೀಗ ಅವರು ಸಿನಿಮಾ ನಟನೆಯಿಂದ ಕೊಂಚ ಬ್ರೇಕ್ ತಗೊಂಡು ಮುಂಬೈನ ಬೀಚ್ನಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ.
ಬೀಚ್ ಪ್ಲೀಸ್ ಇಂಡಿಯಾ ಕಮ್ಯೂನಿಟಿಯ ಜೊತೆ ಸೇರಿ ಜಾಕ್ವೆಲಿನ್ ಅವರು ಸಮುದ್ರ ತೀರವನ್ನು ಸ್ವಚ್ಛಗೊಳಿಸಿದ್ದಾರೆ. ಸ್ವಚ್ಛಗೊಳಿಸಿದ ಫೋಟೋ ಹಂಚಿಕೊಂಡಿದ್ದಾರೆ.
ಸೆಲೆಬ್ರಿಟಿಗಳೆಂದರೆ ಕೇವಲ ಸಿನಿಮಾಗಳಿಗೆ ಮಾತ್ರ ಸೀಮಿತವಾಗಿರದೇ, ಇಂತಹ ಒಳ್ಳೆಯ ಕೆಲಸಗಳನನು ಮಾಡಿದರೆ ಜನರಿಗೂ ಹಾಗೂ ಅವರ ಅಭಿಮಾನಿಗಳಿಗೂ ಸ್ಫೂರ್ತಿ ಸಿಕ್ಕಿದಂತಾಗುತ್ತದೆ.
ನಟಿ ಜಾಕ್ವೆಲಿನ್ ಅವರಿಗೆ ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇದೆ. ಸಮುದ್ರ ತೀರದ ಸ್ವಚ್ಛತೆ ವೇಳೆ ಸಿಕ್ಕ ಶ್ವಾನವನ್ನು ಅವರು ಪ್ರೀತಿಯಿಂದ ಮಾತನಾಡಿಸಿದ್ದಾರೆ. ಇದು ಅವರ ಸ್ವಭಾವವನ್ನು ತಿಳಿಸುತ್ತದೆ.
ಜಾಕ್ವೆಲಿನ್ ಅವರು ಶ್ರೀಲಂಕಾದವರು. ಭಾರತಕ್ಕೆ ಬಂದು ಬಾಲಿವುಡ್ನಲ್ಲಿ ಸಿನಿಮಾಗಳ ಮೂಲಕ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.