ಸ್ಯಾಂಡಲ್ವುಡ್ ಸ್ಟಾರ್ ನಟಿ ಪ್ರಣಿತಾ ಸುಭಾಷ್ ಅವರು ತಮ್ಮ ಮುದ್ದಾದ ಮಕ್ಕಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ರಿವೀಲ್ ಮಾಡಿದ್ದಾರೆ. ಆದರೆ ಪ್ರಣಿತಾ ಸುಭಾಷ್ ಅವರ ಮಕ್ಕಳ ಫೋಟೋಗಳ ಬಗ್ಗೆ ಹೊಗಳೋದು ಬಿಟ್ಟು, ಪ್ರಣಿತಾ ಅವರ ಅಭಿಮಾನಿಗಳು ಪ್ರಣಿತಾ ಸುಭಾಷ್ ಅವರ ಅಂದವನ್ನು ಹೊಗಳಿದ್ದಾರೆ. ನಟಿ ಪ್ರಣಿತಾ ಅವರ ಮಕ್ಕಳ ಚೆಂದದ ಫೋಟೋಗಳಿಗೆ ಲೈಕ್, ಕಾಮೆಂಟ್ ಮಾಡಿದ್ದಾರೆ.
![](https://guaranteenews.com/wp-content/uploads/2025/01/WhatsApp-Image-2025-01-12-at-2.54.34-PM-1-1024x684.jpeg)
ಪ್ರಣೀತಾ 2021 ರಲ್ಲಿ ವೆಗಾ ಸಿಟಿ ಮಾಲ್ ಮಾಲೀಕ ಮತ್ತು ರಿಯಲ್ ಎಸ್ಟೇಟ್ ಉದ್ಯಮಿಯಾದ ನಿತಿನ್ ರಾಜು ಅವರನ್ನು ವಿವಾಹವಾದರು. ವಿವಾಹದ ಬಳಿಕ ಸಿನಿಮಾದಲ್ಲಿ ಪ್ರಣಿತಾ ಕಾಣಿಸಿಕೊಂಡಿದ್ದು ಕಡಿಮೆಯೇ. ಈ ವರ್ಷ ಪ್ರಣಿತಾ ನಟನೆಯ ಮಲಯಾಳಂ ಸಿನಿಮಾ ತಂಗಮಣಿ ಸಿನಿಮಾ ಹಾಗೂ ಕನ್ನಡದಲ್ಲಿ ರಾಮನ ಅವತಾರ ಸಿನಿಮಾ ಬಿಡುಗಡೆಯಾಗಿತ್ತು.
![](https://guaranteenews.com/wp-content/uploads/2025/01/WhatsApp-Image-2025-01-12-at-2.54.34-PM-1024x684.jpeg)
ಪ್ರಣಿತಾ ಸುಭಾಷ್ 2022 ರಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಜುಲೈನಲ್ಲಿ ಎರಡನೇ ಪ್ರೆಗ್ನೆನ್ಸಿ ಬಗ್ಗೆ ಘೋಷಿಸಿದ ಪ್ರಣೀತಾ, 2024 ರ ಸೆಪ್ಟೆಂಬರ್ ತಿಂಗಳಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು.
![](https://guaranteenews.com/wp-content/uploads/2025/01/WhatsApp-Image-2025-01-12-at-2.54.34-PM-1-1-1024x684.jpeg)
ಇತ್ತೀಚೆಗೆ ತಮ್ಮ ಎರಡನೇ ಮಗುವಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಕ್ರಿಸ್ಮಸ್ ಹಬ್ಬದ ಹಿನ್ನೆಲೆಯಲ್ಲಿ ಸೆಲೆಬ್ರೇಷನ್ ಮಾಡುತ್ತಾ, ನಟಿ ಪ್ರಣೀತಾ ಸುಭಾಷ್ ಮತ್ತು ಅವರ ಪತಿ ನಿತಿನ್ ರಾಜು ತಮ್ಮ ಎರಡನೇ ಮಗುವಿನ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಆ ಮೂಲಕ ತಮ್ಮ ಅಭಿಮಾನಿಗಳಿಗೂ ಮಗುವಿನ ಪರಿಚಯ ಮಾಡಿಕೊಟ್ಟಿದ್ದಾರೆ.
![](https://guaranteenews.com/wp-content/uploads/2025/01/WhatsApp-Image-2025-01-12-at-2.54.35-PM-684x1024.jpeg)
ಪ್ರಣಿತಾ ತಮ್ಮ ಮಗಳಿಗೆ ಅರ್ನಾ ಎಂದು ಹೆಸರಿಟ್ಟಿದ್ದು, ಮಗನಿಗೆ ಇನ್ನೂ ಹೆಸರಿಟ್ಟಿಲ್ಲ. ತಮ್ಮನ ಆಗಮನದಿಂದ ಮಗಳು ಖುಷಿಯಾಗಿದ್ದಾಳೆ ಎಂದಿದ್ದಾರೆ. ಪ್ರಣಿತಾ ಕ್ರಿಸ್ಮಸ್ ಹಬ್ಬದಂದು ತನ್ನ ಮಕ್ಕಳ ಫೋಟೊ ಶೇರ್ ಮಾಡಿ ಸಂಭ್ರಮಿಸಿದರೆ, ಅಭಿಮಾನಿಗಳು ಮಾತ್ರ ಎರಡು ಮಕ್ಕಳಾದರೂ ಅದೇ ಚಾರ್ಮ್ ಉಳಿಸಿಕೊಂಡಿರುವ ಪ್ರಣಿತಾ ಅಂದವನ್ನು ಹೊಗಳುತ್ತಿದ್ದಾರೆ.
![](https://guaranteenews.com/wp-content/uploads/2025/01/WhatsApp-Image-2025-01-12-at-2.54.35-PM-1-684x1024.jpeg)
ಪೊರ್ಕಿ ಸಿನಿಮಾದಲ್ಲಿ ದರ್ಶನ್ ತೂಗುದೀಪಗೆ ನಾಯಕಿಯಾಗುವ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಬ್ಯೂಟಿ ಪ್ರಣಿತಾ ಸುಭಾಷ್ , ನಂತರ ತೆಲುಗು, ತಮಿಳು, ಹಿಂದಿ, ಮಲಾಯಳಂ ಸಿನಿಮಾಗಳಲ್ಲೂ ನಟಿಗೂ ಅಲ್ಲೂ ಕೂಡ ಜನಪ್ರಿಯತೆ ಗಳಿಸಿದರು.
ಕನ್ನಡಲ್ಲಿ ದರ್ಶನ್, ಗಣೇಶ್, ದುನಿಯಾ ವಿಜಯ್, ಧ್ರುವ ಸರ್ಜಾ, ಉಪೇಂದ್ರರಂತಹ ದಿಗ್ಗಜರೊಂದಿಗೆ ನಟಿಸಿರುವ ಪ್ರಣೀತಾ, ತೆಲುಗಿನಲ್ಲಿ ಸಿದ್ಧಾರ್ಥ್, ಮಹೇಶ್ ಬಾಬು, ಎನ್ಟಿಆರ್, ಪವನ್ ಕಲ್ಯಾಣ್, ರಾಮ್ ಜೊತೆಯೂ ನಟಿಸಿದ್ದಾರೆ.