ಕನ್ನಡದ ‘ಉಲ್ಲಾಸ ಉತ್ಸಾಹ’ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಸಿನಿಜರ್ನಿ ಆರಂಭಿಸಿದ್ದ ನಟಿ ಯಾಮಿ ಗೌತಮ್ ತಾಯಿಯಾಗಿದ್ದಾರೆ. ಚೊಚ್ಚಲ ಕಂದಮ್ಮನ ಬರುವಿಕೆಗಾಗಿ ಎದುರು ನೋಡ್ತಿದ್ದ ಯಾಮಿ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಮಡಿಲು ತುಂಬಿದ ಮಗನ ಬಗ್ಗೆ ನಟಿ ಖುಷಿ ಹಂಚಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾ ಮೂಲಕ ವಿಚಾರವನ್ನ ತಮ್ಮ ಅಭಿಮಾನಿಗಳೊಟ್ಟಿಗೆ ಶೇರ್ ಮಾಡ್ಕೊಂಡಿದ್ದಾರೆ.
2021ರಲ್ಲಿ ಯಾಮಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಉರಿ ಸಿನಿಮಾ ಖ್ಯಾತಿಯ ನಿರ್ದೇಶಕ ಆದಿತ್ಯ ಧಾರ್ ಜೊತೆ ಹಸೆಮಣೆ ಏರಿದ್ದರು. ಇದೀಗ ಇವರಿಬ್ಬರ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ವಂಶೋದ್ದಾರಕನ ಆಗಮನವಾಗಿದೆ. ಸದ್ಯ ಈ ಜೋಡಿ ದಿಲ್ ಖುಷ್ ಆಗಿದ್ದು, ಮಗನಿಗೆ ಹೆಸರು ಕೂಡ ಇಟ್ಟಿದ್ದಾರೆ. ವೇದಾವಿದ್ ಎಂದು ನಾಮಕರಣ ಮಾಡಿರುವುದಾಗಿ ಘೋಷಿಸಿದ್ದಾರೆ.
ವಿಶೇಷ ಅಂದರೆ ಯಾಮಿ ಮದುವೆ ನಂತರವೂ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದರು. ತೆಲುಗು, ತಮಿಳು, ಹಿಂದಿ, ಪಂಜಾಬಿ ಸೇರಿದಂತೆ ಹಲವು ಭಾಷೆಯ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಕನ್ನಡದಿಂದ ಮಾಯಲೋಕಕ್ಕೆ ಎಂಟ್ರಿಕೊಟ್ಟ ಯಾಮಿಗೌತಮ್ ಮುಂದೆ ಪಂಚಭಾಷಾ ನಟಿಯಾಗಿ ಹೆಸರು ಮಾಡಿದ್ದಾರೆ. ಆರ್ಟಿಕಲ್ 370 ಸಿನಿಮಾದಿಂದ ಯಾಮಿ ಮತ್ತಷ್ಟು ಶೈನ್ ಆಗಿದ್ದಾರೆ.