ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜಾಮೀನಿನ ಮೇಲೆ ರಿಲೀಸ್ ಆಗಿ ಬಂದ ನಟ ದರ್ಶನ್ ಅವರಿಗೆ ಸಂಕಷ್ಟಗಳು ಮುಗಿಯುತ್ತಿಲ್ಲ. ನಟ ಸೇರಿದಂತೆ ಉಳಿದವರಿಗೂ ಈ ಕೇಸ್ನಲ್ಲಿ ರೆಗ್ಯುಲರ್ ಬೇಲ್ ನೀಡಲಾಗಿತ್ತು. ನಟ ದರ್ಶನ್, ಪವಿತ್ರಾಗೌಡ ಸೇರಿ ಏಳು ಆರೋಪಿಗಳ ಜಾಮೀನು ರದ್ದು ಕೋರಿ ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿದೆ. ಜನವರಿ 24ರಂದು ಮಧ್ಯಾಹ್ನ ಪೊಲೀಸರ ಕಡೆಯ ಅರ್ಜಿಯನ್ನು ವಿಚಾರಣೆ ಮಾಡಲಾಗಿದೆ. ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ನಡೆದಿದೆ.
ರೇಣುಕಾಸ್ವಾಮಿ ಕೇಸ್ನಲ್ಲಿ ಜಾಮೀನಿನ ಮೇಲೆ ರಿಲೀಸ್ ಆದ ಏಳು ಆರೋಪಿಗಳ ಜಾಮೀನು ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಕೆಯಾಗಿತ್ತು. ಇಂದು ಈ ಮೇಲ್ಮನವಿಯ ವಿಚಾರಣೆ ನಡೆದಿದೆ. ಸುಪ್ರೀಂ ಕೋರ್ಟ್ ನ್ಯಾ. ಜೆ ಬಿ ಪರ್ಧಿವಾಲಾ ಹಾಗೂ ಆರ್ ಮಹದೇವನ್ ಅವರಿದ್ದ ವಿಭಾಗೀಯ ಪೀಠದಲ್ಲಿ ವಿಚಾರಣೆ ನಡೆದಿದೆ. ರಾಜ್ಯ ಸರ್ಕಾರದ ಪರವಾಗಿ ವಕೀಲ ಲೂತ್ರಾ ವಾದ ಮಂಡಿಸಿದ್ದಾರೆ. ನೀವು ಜಾಮೀನು ರದ್ದು ಕೇಳ್ತಾ ಇದ್ದೀರಾ ಎಂದು ಜಡ್ಜ್ ಪ್ರಶ್ನಿಸಿದ್ದಾರೆ.
ಹೈಕೋರ್ಟ್ ವಿವರವಾದ ಆದೇಶ ಮಾಡಿ ಆರೋಪಿಗಳಿಗೆ ಜಾಮೀನು ನೀಡಿದೆ ಎಂದಿರುವ ಜಡ್ಜ್ ವಿಚಾರಣೆ ಮುಂದೂಡಿದ್ದಾರೆ. ಬೇರೆ ಆರೋಪಿಗಳು ಜಾಮೀನು ಕೋರಿದರೆ ಹೈಕೋರ್ಟ್ ಆದೇಶ ಆಧರಿಸಬಾರದು. ಮೆರಿಟ್ ಮೇಲೆ ಜಾಮೀನು ಅರ್ಜಿ ನಿರ್ಧರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದ ಎಲ್ಲ ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ.
ಸದ್ಯ ರಾಜ್ಯ ಸರ್ಕಾರದ ಮೇಲ್ಮನವಿ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಂದೂಡಿದೆ. ಎಲ್ಲ ಏಳು ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲು ನಿರ್ದೇಶಿಸಿದ್ದು, ನೋಟಿಸ್ ಜಾರಿ ಆದ ಬಳಿಕ ಮುಂದಿನ ವಿಚಾರಣೆ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸೂಚನೆ ನೀಡಿದೆ.
ಯಾರೆಲ್ಲಾ ಜಾಮೀನು ರದ್ದಿಗೆ ಅರ್ಜಿ ಸಲ್ಲಿಕೆ?
- ಪವಿತ್ರಾ ಗೌಡ (ಎ 1)
- ದರ್ಶನ್ (ಎ 2)
- ಜಗದೀಶ್ ಜಗ್ಗ ಅಲಿಯಾಸ್ ಜಗ್ಗ (ಎ 6)
- ಅನುಕುಮಾರ್ ಅಲಿಯಾಸ್ ಅನು (ಎ 7)
- ಆರ್ ನಾಗರಾಜು (ಎ 11)
- ಎಂ ಲಕ್ಷ್ಮಣ್ (ಎ 12)
- ಪ್ರದೋಶ್ ಎಸ್. ರಾವ್ (ಎ 14)
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc