ನಿರ್ದೇಶಕ ವಿಎ ಶ್ರೀಕುಮಾರ್ ಮೆನನ್ ವಿರುದ್ಧ ಕಿರಿಯ ನಟಿಯೋರ್ವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
2020 ರಲ್ಲಿ ಕೊಚ್ಚಿಯ ಹೋಟೆಲ್ ಕೋಣೆಯಲ್ಲಿ ಮೆನನ್ ಅವರು ತನಗೆ ಜಾಹೀರಾತುವೊಂದರಲ್ಲಿ ಕೆಲಸ ಮಾಡುವ ಭರವಸೆ ನೀಡಿ, ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಿರಿಯ ನಟಿ ಆರೋಪಿಸಿದ್ದಾರೆ. ನಟಿಯು ಈಮೇಲ್ ಮೂಲಕ ದೂರು ದಾಖಲಿಸಿದ ನಂತರ ಮರಡು ಠಾಣೆಯ ಪೊಲೀಸರು ನಿರ್ದೇಶಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.