ಅಬ್ಬಬ್ಬಾ.. ಪುಷ್ಪರಾಜ್ ಎಂಟ್ರಿಗೆ ಭಾರತೀಯ ಸಿನಿದುನಿಯಾ ಥಂಡಾ ಹೊಡೆದಿದೆ. ಯೆಸ್.. ಇದೇ ಡಿಸೆಂಬರ್ 5ಕ್ಕೆ ರಿಲೀಸ್ ಆಗ್ತಿರೋ ಪುಷ್ಪ-2 ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಬಿಹಾರದ ಪಾಟ್ನಾದಲ್ಲಿ ಟ್ರೈಲರ್ ಲಾಂಚ್ ಇವೆಂಟ್ ಮಾಡಿ, ಉತ್ತರ ಭಾರತದಿಂದ ಪ್ರಮೋಷನ್ಸ್ ಶುರುವಿಟ್ಟಿರೋ ಟೀಂ, ಮುಂದಿನ ದಿನಗಳಲ್ಲಿ ಕೋಲ್ಕತ್ತಾ, ಮುಂಬೈ ಮುಗಿಸಿ, ಸೌತ್ ಸಿಟಿಗಳಿಗೆ ಲಗ್ಗೆ ಇಡಲಿದೆ. 2021ರ ಡಿಸೆಂಬರ್ನಲ್ಲಿ ತೆರೆಕಂಡ ಸುಕುಮಾರ್- ಅಲ್ಲು ಅರ್ಜುನ್ ಕಾಂಬೋನ ಪುಷ್ಪ ಸಿನಿಮಾ, ನೋಡುಗರ ದಿಲ್ ದೋಚಿತ್ತು. 400 ಕೋಟಿ ಬಾಕ್ಸ್ ಆಫೀಸ್ ಪೈಸಾ ವಸೂಲ್ ಜೊತೆಗೆ ನ್ಯಾಷನಲ್ ಸ್ಟಾರ್ ಆಗಿ ಅಲ್ಲು ಅರ್ಜುನ್ ಬಡ್ತಿ ಕೂಡ ಪಡೆದಿದ್ರು. ಇದೀಗ ಮೂರು ವರ್ಷಗಳ ಬಳಿಕ ಅದ್ರ ಸೀಕ್ವೆಲ್ ಬರ್ತಿದೆ. ಸಹಜವಾಗಿಯೇ ಕುತೂಹಲ ದುಪ್ಪಟ್ಟಾಗಿದೆ.
ತೆಲುಗು ಡೈರೆಕ್ಟರ್ ಬುಚ್ಚಿಬಾಬು ಹೇಳಿದಂತೆ ಪುಷ್ಪ-2 ಪುಷ್ಪ ಸಿನಿಮಾಗಿಂತ ಹತ್ತು ಪಟ್ಟು ಜೋರಿರಲಿದೆ. ಅದು ಟ್ರೈಲರ್ ಝಲಕ್ನಲ್ಲಿ ಎದ್ದು ಕಾಣ್ತಿದೆ. ರಿಲೀಸ್ಗೂ ಮೊದಲೇ ಸಾವಿರ ಕೋಟಿ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿರೋ ಪುಷ್ಪ-2, ಅಕ್ಷರಶಃ ಬಾಕ್ಸ್ ಆಫೀಸ್ ರೂಲ್ ಮಾಡೋದರ ಹಿಂಟ್ ನೀಡಿದೆ. ಪುಷ್ಪ ಅಂದ್ರೆ ಫ್ಲವರ್ ಅಂದ್ಕೊಂಡ್ರಾ..? ಅಲ್ಲ ಫೈಯರ್ ಅನ್ನೋ ಡೈಲಾಗ್ ಮೊದಲ ಭಾಗದಲ್ಲಿತ್ತು. ಆದ್ರೀಗ ಅದು ಬರೀ ಫೈಯರ್ ಅಲ್ಲ ವೈಲ್ಡ್ ಫೈಯರ್ ಅಂತಿದೆ ಪಾರ್ಟ್-2. ಅಲ್ಲದೆ, ಪುಷ್ಪ ಈ ಬಾರಿ ಬರೀ ನ್ಯಾಷನಲ್ ಅಲ್ಲ. ಇಂಟರ್ ನ್ಯಾಷನಲ್. ಹೌದು.. ಪುಷ್ಪ-2 ಮೇಕಿಂಗ್, ಎಲಿವೇಷನ್, ಕಥೆ, ಡೈಲಾಗ್ಸ್ ಎಲ್ಲವೂ ಚಿತ್ರದ ಸ್ಕೇಲ್ ಹೆಚ್ಚಿಸಿದೆ. ರಕ್ತ ಚಂದನ ಮರಗಳ ಸ್ಮಗ್ಲಿಂಗ್ನಿಂದ ಬಹುದೊಡ್ಡ ಸ್ಮಗ್ಲರ್ ಆಗಿ ಹೊರಹೊಮ್ಮಿರೋ ಪುಷ್ಪ, ಸ್ಮಗ್ಲಿಂಗ್ ದುನಿಯಾನ ರೂಲ್ ಮಾಡೋಕೆ ಸಜ್ಜಾಗಿದ್ದಾರೆ. ದೇವಿಶ್ರೀ ಪ್ರಸಾದ್ ಮ್ಯೂಸಿಕ್ ಜೊತೆ ಈ ಸಿನಿಮಾ ಪುಷ್ಪಗಿಂತ ಜಾಸ್ತಿ ಕಿಕ್ ಕೊಡಲಿದ್ದು, ಅಲ್ಲು ಅರ್ಜುನ್ ಕರಿಯರ್ಗೆ ಮಹತ್ವದ ಟ್ವಿಸ್ಟ್ ಕೂಡ ನೀಡುವ ಸೂಚನೆ ಕೊಟ್ಟಿದೆ.
ಅಂದಹಾಗೆ ಈ ಬಾರಿ ಭನ್ವರ್ ಸಿಂಗ್ ಶೇಖಾವತ್ ಆದಂತಹ ಫಹಾದ್ ಫಾಸಿಲ್ ಹಾಗೂ ಪುಷ್ಪರಾಜ್ ಅಲಿಯಾಸ್ ಅಲ್ಲು ಅರ್ಜುನ್ ಜುಗಲ್ಬಂಧಿ ಜೋರಿರಲಿದೆ. ಇವ್ರ ಟಗ್ ಆಫ್ ವಾರ್ಜೊತೆಗೆ ನಮ್ಮ ಕನ್ನಡಿಗರಾದ ರಶ್ಮಿಕಾ ಮಂದಣ್ಣ ಹಾಗೂ ಡಾಲಿ ಧನಂಜಯ ಕೂಡ ಚಿತ್ರದ ಹೈಲೈಟ್ಸ್. ಶ್ರೀವಲ್ಲಿಯಾಗಿ ರಶ್ಮಿಕಾ ಮೋಡಿ ಮಾಡಿದ್ರೆ, ಜಾಲಿರೆಡ್ಡಿಯಾಗಿ ಡಾಲಿ ಮಿಂಚು ಹರಿಸಲಿದ್ದಾರೆ. ವಿಶೇಷ ಅಂದ್ರೆ ಪುಷ್ಪ ಈಸ್ ನಾಟ್ ಜಸ್ಟ್ ನೇಮ್. ಅದೊಂದು ಬ್ರ್ಯಾಂಡ್. ಇದನ್ನ ಟ್ರೈಲರ್ನಲ್ಲಿ ಸ್ವತಃ ರಶ್ಮಿಕಾನೇ ಹೇಳ್ತಾರೆ. ಅಲ್ಲದೆ, ಹೆಂಡ್ತಿ ಮಾತು ಗಂಡ ಕೇಳಿದ್ರೆ ಹೇಗಿರಲಿದೆ ಅನ್ನೋದನ್ನ ಪ್ರಪಂಚಕ್ಕೆ ತೋರಿಸ್ತೀನಿ ಅನ್ನೋ ಹೀರೋ ಡೈಲಾಗ್ ಕಿಕ್ ಕೊಡ್ತಿದೆ.
ಎಲ್ಲವೂ ಓಕೆ.. ಆದ್ರೆ ಪುಷ್ಪರಾಜ್ ತಲೆ ನಮ್ಮ ಕನ್ನಡತಿಯ ಕಾಲಡಿ ಇರೋ ದೃಶ್ಯ ಹತ್ತು ಹಲವು ಗುಸು ಗುಸುಗಳಿಗೆ ಕಾರಣವಾಗ್ತಿದೆ. ಅದ್ರಲ್ಲೂ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಫ್ಯಾನ್ಸ್, ರಶ್ಮಿಕಾ ಕಾಲಿನಿಂದ ತಮ್ಮ ನೆಚ್ಚಿನ ನಾಯಕನಟ ಪುಷ್ಪ ಚಿತ್ರದ ಸಿಗ್ನೇಚರ್ ಸ್ಟೈಲ್ನ ಮಾಡಿ ತೋರಿಸಿರೋದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನೀವು ಇಷ್ಟು ದೊಡ್ಡ ಸ್ಟಾರ್ ಆಗಿ ನಿಮ್ಮ ತಲೆಯನ್ನ ಆಕೆಯ ಕಾಲಿಗೆ ತಾಕಿಸಿರೋದು ಸರಿಯಿಲ್ಲ ಅಂತ ಫ್ಯಾನ್ಸ್ ಜೊತೆ ನೆಟ್ಟಿಗರು ಕೂಡ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ. ಅದೇನೇ ಇರಲಿ, ಹತ್ತು ಕೋಟಿಗೂ ಅಧಿಕ ವೀವ್ಸ್ ಪಡೆದಿರೋ ಪುಷ್ಪ-2 ಟ್ರೈಲರ್ ಟ್ರೆಂಡಿಂಗ್ನಲ್ಲಿದ್ರೂ ಸಹ, ಈ ರೀತಿ ವಿವಾದಾತ್ಮಕ ದೃಶ್ಯದಿಂದ ಹೆಣ್ಣಿನ ಬಳಿ ಕಡಿಮೆಯಾದಂತಿರೋ ಅಲ್ಲು ಅರ್ಜುನ್ ನಡೆ ಚಿತ್ರಕ್ಕೆ ಕೊಂಚ ಹಿನ್ನಡೆ ತಂದಂತಿದೆ.