ಅನಂತ್ ಮತ್ತು ರಾಧಿಕಾ ಮದುವೆ ಜುಲೈ 12ರಂದು ಅದ್ಧೂರಿಯಾಗಿ ನಡೆದಿದೆ. ಬಳಿಕ ಜುಲೈ 13ರಂದು ಸಂಜೆ ನಡೆದ ಶುಭ ಅಶೀರ್ವಾದ್ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರ ದಂಡೇ ಭಾಗಿಯಾಗಿದೆ. ಇದರಲ್ಲಿ ಕನ್ನಡದ ನಟಿ, ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಸೀರೆಯುಟ್ಟು ಮಿಂಚಿದ್ದಾರೆ. ನವಿಲಿನ ಚಿತ್ತಾರವಿರುವ ನೆವಿ ಬ್ಲ್ಯೂ ಬಣ್ಣದ ಹೆವಿ ಡಿಸೈನ್ ಸೀರೆಯಲ್ಲಿ ಕನ್ನಡತಿ ರಶ್ಮಿಕ ಕಂಗೊಳಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಬಿಟ್ಟರೆ ಸ್ಯಾಂಡಲ್ವುಡ್ನಿಂದ ಭಾಗಿಯಾದ ಏಕೈಕ ನಟಿ ರಶ್ಮಿಕ ಆಗಿದ್ದಾರೆ.
ಈ ಕಾರ್ಯಕ್ರಮದ ರೆಡ್ ಕಾರ್ಪೆಟ್ನಲ್ಲಿ ನೀಲಿ ಬಣ್ಣದ ಸೀರೆಯುಟ್ಟು ರಶ್ಮಿಕಾ ಕಂಗೊಳಿಸಿದ್ದಾರೆ. ಎಂದಿನಂತೆ ತಮ್ಮ ಸಿಗ್ನೇಚರ್ ಶೈಲಿಯಲ್ಲಿ ಮಾಧ್ಯಮಗಳ ಕ್ಯಾಮೆರಾಗೆ ಪೋಸ್ ಕೊಟ್ಟ ರಶ್ಮಿಕಾ, ಪಾಪರಾಜಿಗಳ ಆಸೆಯಂತೆ ಪುಷ್ಪರಾಜ್ ಸ್ಟೈಲ್ ಪೋಸ್ ಕೊಟ್ಟು ಮುದ್ದಾದ ನಗು ಬೀರಿದ್ದಾರೆ. ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.
ಸದ್ಯ ರಶ್ಮಿಕಾ ನಟನೆಯಲ್ಲಿ ಸಖತ್ ಬ್ಯುಸಿ ನಟಿಯಾಗಿದ್ದು ಪುಷ್ಪ 2, ಅನಿಮಲ್ ಪಾರ್ಕ್, ಕುಬೇರ, ರೈನ್ಬೋ, ದಿ ಗರ್ಲ್ಫ್ರೆಂಡ್, ಸಿಖಂದರ್ ಸಿನಿಮಾ ಸೇರಿದಂತೆ ಹಲವು ಚಿತ್ರಗಳು ರಶ್ಮಿಕಾ ಮಂದಣ್ಣ ಕೈಯಲ್ಲಿವೆ.