ನಟಿ ಸಾಯಿ ಪಲ್ಲವಿ ನಟನೆಯ ಅಮರನ್ ಸಿನಿಮಾ ಸೂಪರ್ ಹಿಟ್ ಆಯಿತು. ಈ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಅವರ ನಟನೆಯ ಎಲ್ಲರಿಂದಲೂ ಮೆಚ್ಚುಗೆ ಸಿಕ್ಕಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಕಾಶಿಗೆ ಭೇಟಿ ನೀಡಿದ್ದಾರೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಾಯಿ ಪಲ್ಲವಿ ಅವರಿಗೆ ಬೇಡಿಕೆ ಇದ್ದು, ಇದೀಗ ಕಾಶಿಯ ಅನ್ನಪೂರ್ಣ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ನಟಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ದೇವಸ್ಥಾನಕ್ಕೆ ಬಂದ ನಟಿ ಬ್ಲೂ ಕಲರ್ ಸಲ್ವಾರ್ ಸೂಟ್, ದುಪಟ್ಟಾ, ಕೊರಳಲ್ಲಿ ಮಾರಿಗೋಲ್ಡ್ ಮಾಲೆ, ಕೈಯಲ್ಲು ರುದ್ರಾಕ್ಷಿ ಮಾಲೆ ಧರಿಸಿ ಬಂದು ದೇವಿಯ ದರ್ಶನ ಪಡೆದರು.