ಕೆಲ ದಿನಗಳ ಹಿಂದಷ್ಟೆ ಕನ್ನಡ ಇಂಡಸ್ಟ್ರಿ ಬಗ್ಗೆ ಮಾತನಾಡಿ ಟ್ರೋಲ್ ಆಗಿದ್ದ ನಟಿ ಸೌಮ್ಯರಾವ್, ಇದೀಗ ಮತ್ತೊಂದು ಹೇಳಿಕೆ ನೀಡಿದ್ದು, ಸಖತ್ ವೈರಲ್ ಆಗಿದೆ. ಕನ್ನಡ ಡೈರೈಕ್ಟರ್ಸ್ ಬಗ್ಗೆ ನಟಿ ಸೌಮ್ಯರಾವ್ ಕರಾಳ ಮುಖ ಬಿಚ್ಚಿಟ್ಟಿದ್ದಾರೆ. ಈ ನಟಿಗೂ ಆಗಿತ್ತಂತೆ ಈ ರೀತಿ ಬ್ಯಾಡ್ ಎಕ್ಸ್ ಪೀರಿಯೆನ್ಸ್. ಈ ಬಗ್ಗೆ ಈ ನಟಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಸೌಮ್ಯ ಬಿಚ್ಚಿಟ್ಟ ಆ ಕರಾಳ ಸತ್ಯವೇನು..?
ಖಾಸಗಿ ಸಂದರ್ಶನವೊಂದರಲ್ಲಿ ನಟಿ ಸೌಮ್ಯರಾಮ್ ಕನ್ನಡ ಚಿತ್ರರಂಗದ ಬಗ್ಗೆ ಮಾತನಾಡಿದ್ದು, ಸಿನಿಮಾ , ಧಾರವಾಹಿಗಳಲ್ಲಿ ನಟಿಸಬೇಕೆಂದರೆ, ಅವಕಾಶ ಕೇಳಿಕೊಂಡು ಹೋಗುವ ನಟಿಯರಿಗೆ ಡೈರೆಕ್ಟರ್ಸ್, ಪ್ರೊಡ್ಯೂಸರ್ಸ್ ಡಿಮ್ಯಾಂಡ್ ಮಾಡ್ತಾರೆ, ಬಿಕಿನಿ ತೊಟ್ಟು, ಲಿಪ್ ಲಾಕ್ ಮಾಡಿ, ಚೆಸ್ಟ್, ವೇಯಿಸ್ಟ್ ತೋರಿಸಬೇಕೆಂದು ಕನ್ನಡ ಡೈರೈಕ್ಟರ್ಸ್ ವಿರುದ್ಧ ಆರೋಪ ಮಾಡಿದ್ದಾರೆ. ಜನ ಕೂಡ ಅದೇ ರೀತಿ ಸೀನ್ಸ್ ಗಾಗಿ ಥಿಯೇಟರ್ಗೆ ಬರ್ತಾರೆಂದು ಡೈರೆಕ್ಟರ್ಸ್ ಹೇಳ್ತಾರಂತೆ. ಹೀಗೆ ಯಾರ ಹೆಸರೂ ಹೇಳದೆ ಕನ್ನಡದ ಚಿತ್ರರಂಗದ ನಿರ್ದೇಶಕರು, ನಿರ್ಮಾಪಕರುಗಳ ಮೇಲೆ ನಟಿ ಸೌಮ್ಯರಾವ್ ಆರೋಪ ಮಾಡಿದ್ದಾರೆ.
ಒಂದಷ್ಟು ಮಂದಿ ಅವಕಾಶಕ್ಕಾಗಿ ಅದನ್ನೆಲ್ಲಾ ಮಾಡೋರು ಕೂಡ ಇದ್ದಾರೆ. ಎರಡೂ ಬಗೆಯ ನಟಿಮಣಿಯರು ಇದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳಿಲ್ಲ ಅಂತ ತೆಲುಗಿಗೆ ಎಂಟ್ರಿ ಕೊಟ್ಟಿದ್ದ ಸೌಮ್ಯ ರಾವ್, ಮುಂದಿನ ದಿನಗಳಲ್ಲಿ ಸ್ಯಾಂಡಲ್ ವುಡ್ ಮತ್ತಷ್ಟು ಚಿಕ್ಕದಾಗಲಿದೆ ಎಂದು ನಟಿ ಸೌಮ್ಯರಾವ್ ಹೇಳಿದ್ದಾರೆ.
ಈ ಹಿಂದೆಯೂ ಕೂಡ ನಟಿ ಸೌಮ್ಯ ರಾವ್ ಕನ್ನಡ ಚಿತ್ರರಂಗ ಕುರಿತು ಮಾತನಾಡಿದ್ದು, ‘ಕನ್ನಡ ಇಂಡಸ್ಟ್ರಿ ಕುರಿತು ನಾನು ಜಾಸ್ತಿ ಮಾತಾಡಲ್ಲ. ಕನ್ನಡ ಚಿತ್ರರಂಗದ ಬಗ್ಗೆ ನನಗೇನೂ ಅಭಿಮಾನವಿಲ್ಲ’. ಒಳ್ಳೆಯ ಟ್ಯಾಲೆಂಟ್ಸ್ ಗೆ ಅವರು ಸಪೋರ್ಟ್ ಮಾಡಲ್ಲ. ಹಾಗಾಗಿಯೇ ಕನ್ನಡ ಚಿಕ್ಕ ಇಂಡಸ್ಟ್ರಿ ಆಗಿದೆ ಎಂದು ಕನ್ನಡ ಚಿತ್ರರಂಗದ ಬಗ್ಗೆ ನಟಿ ಹೇಳಿಕೆ ನೀಡಿದ್ದರು.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc