ಕನ್ನಡದ ನಂಬರ್ 1 ಆಂಕರ್ಗಳ ಪೈಕಿ ಕರಾವಳಿ ಚೆಲುವೆ ಅನುಶ್ರೀ ಕೂಡ ಒಬ್ಬರು. ಜನಪ್ರಿಯ ನಿರೂಪಕಿಯಾಗಿ ಕರುನಾಡಿನ ಮನೆಮನ ತಲುಪಿರೋ ಅನುಶ್ರೀ, ಬಹುಬೇಡಿಕೆ ಆಂಕರ್ ಆಗಿ ಗುರುತಿಸಿಕೊಂಡಿದ್ದಾರೆ. ನಿರೂಪಣೆ ಜೊತೆಗೆ ನಟಿಯಾಗಿಯೂ ಸೈ ಎನಿಸಿಕೊಂಡಿದ್ದಾರೆ. ಗಾಡ್ ಫಾದರ್ ಇಲ್ಲದೇ ಕಿರುತೆರೆ ಲೋಕಕ್ಕೆ ಎಂಟ್ರಿಕೊಟ್ಟು ಇವತ್ತು ಅನೇಕರಿಗೆ ರೋಲ್ ಮಾಡೆಲ್ ಆಗಿರೋ ಅನುಶ್ರೀ, ತಮ್ಮ ಬ್ಯುಸಿ ಷೆಡ್ಯೂಲ್ಡ್ ನಡುವೆ ಫ್ರೀ ಮಾಡ್ಕೊಂಡು ತುಳು ಚಾನಲ್ಗೆ ಇಂಟರ್ ವ್ಯೂ ಕೊಟ್ಟಿದ್ದಾರೆ. ಸಕ್ಸಸ್ ಹಾದಿಯಲ್ಲಿ ಎದುರಾದ ಕಷ್ಟ-ಸುಖ, ನೋವು-ನಲಿವುಗಳ ಜೊತೆಗೆ ಸವಾಲುಗಳ ಬಗ್ಗೆ ಮಾತನಾಡಿರೋ ಅನುಶ್ರೀ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಹಾಗೂ ರಾಜ್ ಬಿ ಶೆಟ್ಟಿ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರಗಳನ್ನ ಹಂಚಿಕೊಂಡಿದ್ದಾರೆ. ರಾಜ್ ಬಿ ಶೆಟ್ಟರನ್ನ ತನ್ನ ಪಾಲಿನ ಆಧ್ಯಾತ್ಮಿಕ ಗುರು ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಅನುಶ್ರೀ ತಮ್ಮ ಸುತ್ತ ಒಂದು ಕೋಟೆ ಕಟ್ಟಿಕೊಂಡು ಬದುಕುತ್ತಿದ್ದರಂತೆ. ಜೀವನದ ಬಗ್ಗೆ ತುಂಬಾ ಯೋಚನೆ ಮಾಡುತ್ತಿದ್ದರಂತೆ. ಆದರೆ, ರಾಜ್ ಬಿ ಶೆಟ್ಟರು ಪರಿಚಯವಾದ ಮೇಲೆ ಜೀವನವನ್ನ ನೋಡುವ ರೀತಿಯನ್ನೇ ಬದಲಿಸಿಕೊಂಡರಂತೆ. ಹೀಗಂತ ನಾವು ಹೇಳ್ತಿಲ್ಲ ಖುದ್ದು ಅನುಶ್ರೀಯೇ ಹೇಳಿಕೊಂಡಿದ್ದಾರಂತೆ. ನನ್ನ ಪಾಲಿಗೆ ರಾಜ್ ಬಿ ಶೆಟ್ಟರು ದ್ರೋಣಾಚಾರ್ಯರು, ನಾನು ಏಕಲವ್ಯ ಥರ ಇದ್ದುಬಿಡ್ತೀನಿ. ಅವರಿಂದ ತುಂಬಾ ಕಲ್ತಿದ್ದೇನೆ.
ಯೋಚನೆ ಮಾಡುವ ರೀತಿಯನ್ನ ಬದಲಾಯಿಸಿಕೊಂಡಿದ್ದೇನೆ. ಎಲ್ಲದಕ್ಕಿಂತ ಹೆಚ್ಚಾಗಿ ಸಂತೋಷವಾಗಿರುವುದನ್ನ ಕಲ್ತಿದ್ದೇನೆ. ಚಿಕ್ಕ ಚಿಕ್ಕ ವಿಚಾರಗಳನ್ನ ಎಂಜಾಯ್ ಮಾಡ್ಕೊಂಡು ಜೀವನ ಮುನ್ನಡೆಸುತ್ತಿದ್ದೇನೆ. ನಾನು ಮಂಗಳೂರಿಗೆ ಬಂದಾಗೆಲ್ಲ ರಾಜ್ ಬಿ ಶೆಟ್ಟಿಯವರ ಆಫೀಸ್ಗೆ ಭೇಟಿ ಕೊಟ್ಟು ಅವರೊಟ್ಟಿಗೆ ಕೆಲ ಸಮಯ ಕಳೆಯುತ್ತೇನೆ. ಆ ಸಮಯ ನನ್ನ ಕಷ್ಟವನ್ನೆಲ್ಲಾ ಹೀಲ್ ಮಾಡುತ್ತೆ. ಒಂದು ಬ್ಲಾಕ್ ಟೀ ಕುಡಿದು ಶೆಟ್ರ ಮುದ್ದಿನ ನಾಯಿಮರಿಗಳ ಜೊತೆ ಒಂದು ರೌಂಡ್ ಮುಗಿಸಿದರೆ ಆ ದಿನ ಸುಂದರ ಮತ್ತು ಸುಮಧುರವಾಗಿರುತ್ತೆ ಎಂದಿದ್ದಾರೆ ಅನುಶ್ರೀ..
ಇದೇ ವೇಳೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟರ ಬಗ್ಗೆಯೂ ಅನುಶ್ರೀ ಮಾತನಾಡಿದ್ದಾರೆ. ಕರ್ಣನದ್ದು ಪರಿಶುದ್ದವಾದ ಮನಸ್ಸು. ಅವರೊಬ್ಬ ಜಂಟಲ್ಮ್ಯಾನ್. ಯಾರೊಬ್ಬರ ಬಗ್ಗೆಯೂ ಕೆಟ್ಟದ್ದು ಮಾತನಾಡಲ್ಲ. ಮಹಿಳೆಯರಿಗೆ ತುಂಬಾ ಗೌರವ ಕೊಡ್ತಾರೆ. ಕೆಲಸದ ಬಗ್ಗೆ ಮತ್ತು ಆಧ್ಯಾತ್ಮದ ಬಗ್ಗೆ ಮಾತನಾಡಲಿಕ್ಕೆ ತುಂಬಾ ಇಂಟ್ರೆಸ್ಟ್ ತೋರಿಸ್ತಾರೆ.
ಹೀಗಾಗಿ, ನಾವು ಕರ್ಣ ಉರುಫ್ ರಕ್ಷಿತ್ ಶೆಟ್ಟರ ಜೊತೆ ಮಾತನಾಡುವಾಗ ಆಧ್ಯಾತ್ಮ ಮತ್ತು ಕೆಲಸದ ಬಗ್ಗೆ ಅಷ್ಟೇ ಹೆಚ್ಚು ಮಾತುಕತೆ ನಡೆಸ್ತೇವೆ. ಅವನೇ ಶ್ರೀಮನ್ನಾರಾಯಣನೊಳಗೊಬ್ಬ ಅದ್ಭುತ ಬರಹಗಾರನಿದ್ದಾನೆ. ಅವರ ಸಿನ್ಮಾಗಳನ್ನ ನೋಡಿದರೆ, ಅವರ ಸಿನಿಮಾಗಳಲ್ಲಿ ಶೆಟ್ರು ಬರೆದಿರುವಂತಹ ಹಾಡುಗಳನ್ನ ನೋಡಿದರೆ ನಿಮಗೆ ಗೊತ್ತಾಗುತ್ತೆ ರಕ್ಷಿತ್ ಬರವಣಿಗೆ ಎಂತಹದ್ದು ಅನ್ನೋದು. ಅಂದ್ಹಾಗೇ, ನನಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದ ನಾ ಈ ಸಂಜೆಗೆ ಹಾಡು ಬಹಳ ಇಷ್ಟ. ಆ ಹಾಡಿನಲ್ಲಿ ಅರ್ಥವಿದೆ, ಆಳವಿದೆ ಎನ್ನುವ ಮೂಲಕ ಕರ್ಣನ ಕಲೆಯನ್ನ ಕೊಂಡಾಡಿದ್ದಾರೆ ಅನುಶ್ರೀ.