ಆಷಾಢ ಸೋಮವಾರದ ಪ್ರಯುಕ್ತ ಅರಸೀಕೆರೆಯ ಪ್ರಸಿದ್ಧ ಜೇನುಕಲ್ಲು ಸಿದ್ದೇಶ್ವರ ಬೆಟ್ಟಕ್ಕೆ ಬರಿಗಾಲಿನಲ್ಲಿ ಹತ್ತಿ ಹರಕೆ ತೀರಿಸಿದ್ದಾರೆ ಡಾಲಿ ಧನಂಜಯ. ಜಿಟಿ ಜಿಟಿ ಮಳೆಯ ನಡುವೆ, ಸಾಮಾನ್ಯರಂತೆ ಬೆಟ್ಟದ ಮೆಟ್ಟಿಲುಗಳನ್ನ ಬರಿಗಾಲಿನಲ್ಲಿ ಹತ್ತಿ, ಸಿದ್ದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿರೋ ಡಾಲಿ ನಟನೆಯಲ್ಲಿ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಧನಂಜಯ್, ಹೊಸಬರ ಹಲವು ಸಿನಿಮಾಗಳಿಗೆ ಹಣ ಹಾಕಿ ನಿರ್ಮಾಣ ಮಾಡುತಿದ್ದಾರೆ. ಇತ್ತೀಚಿಗಷ್ಟೇ ರಿಲೀಸ್ ಅದ, ಕೋಟಿ ಸಿನಿಮಾ ನಿರೀಕ್ಷಿತ ಯಶಸ್ಸು ಕಾಣದೆ ಹೋದರು, ಹೆಸರು ಮಾಡಿತು. ದೊಡ್ಡ ದೊಡ್ಡ ಸಿನಿಮಾಗಳ ಕ್ಯೂ ಇಟ್ಟುಕೊಂಡಿರೋ ಡಾಲಿ, ಸ್ನೇಹಿತರ ಜೊತೆಗೆ ಜೇನುಕಲ್ಲು ಏರಿರುವುದು ಅಚ್ಚರಿ ಮೂಡಿಸಿದೆ.
ನಟ ರಕ್ಷಸನಿಗೆ ಸಿನಿಮಾದಿಂದ ಬಿಡುವು ಸಿಕ್ಕಾಗ ಅರಸೀಕೆರೆ, ಹಾಸನದ ಸುತ್ತಮುತ್ತ ಓಡಾಟ, ಮಂದಿರಗಳ ಭೇಟಿ ಅಪರೂಪವೇನಲ್ಲ. ಡಾಲಿಗೆ ಜೇನುಕಲ್ಲು ಸಿದ್ದಯನ ಕೃಪೆ ಎಷ್ಟರ ಮಟ್ಟಿಗೆ ದೊರೆಯುತ್ತೆ, ಯಾವೆಲ್ಲಾ ಸಿನಿಮಾಗಳು ಎಷ್ಟೆಲ್ಲ ಸದ್ದು ಮಾಡುತ್ತೆ, ಸಿದ್ದೇಶ್ವರನೇ ಬಲ್ಲ