- ಶ್ರೀಲಂಕನ್ ಚೆಲುವೆ, ಬಾಲಿವುಡ್ ನ ಹಾಟ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ
- ಜಾಕ್ವೆಲಿನ್ ನ ತೆಲುಗು ಸಿನಿಮಾರಂಗಕ್ಕೆ ಕರೆತರುವ ಸುದ್ದಿ ಕೊಟ್ಟು ಎಲ್ಲರಿಗೂ ಸರ್ ಪ್ರೈಸ್ ನೀಡಿದ್ದಾರೆ.
ಶ್ರೀಲಂಕನ್ ಚೆಲುವೆ, ಬಾಲಿವುಡ್ ನ ಹಾಟ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡೀಸ್ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡ್ತಿದ್ದಾರೆ. ಪೇಪರ್ ಬಾಯ್ ಸಿನಿಮಾದ ಮೂಲಕ ಟಿಟೌನ್ ಅಂಗಳದಲ್ಲಿ ಹೊಸ ಸಂಚಲನ ಮೂಡಿಸಿರೋ ಡೈರೆಕ್ಟರ್ ಜಯಶಂಕರ್, ಕಿಕ್ ಚೆಲುವೆನಾ ತೆಲುಗು ಸಿನಿಮಾ ರಂಗಕ್ಕೆ ಕರ್ಕೊಂಡು ಬರ್ತಿದ್ದಾರೆ.
ಸಾಹೋ ಸಿನಿಮಾದಲ್ಲಿ ಶ್ರೀಲಂಕನ್ ಸುಂದರಿಯ ಡ್ಯಾನ್ಸ್ ಪ್ಲಸ್ ಪವರ್ ಫುಲ್ ಪರ್ಫಾಮೆನ್ಸ್ ನೋಡಿ ಸ್ಟನ್ ಆಗಿರೋ ಡೈರೆಕ್ಟರ್ ಜಯಶಂಕರ್, ಜಾಕಿಗೆ ರೆಡ್ ಕಾರ್ಪೆಟ್ ಹಾಕಿದ್ದಾರೆ. ಫೀಮೇಲ್ ಓರಿಯೆಂಟೆಡ್ ಸಿನಿಮಾಗೆ ಜಾಕಿನಾ ಸೆಲೆಕ್ಟ್ ಮಾಡ್ಕೊಂಡಿದ್ದು, ಫುಲ್ ಫ್ಲೆಡ್ಜ್ ತೆಲುಗು ಹೀರೋಯಿನ್ನಾಗಿ ಟಿಟೌನ್ ಆಡಿಯನ್ಸ್ ಗೆ ಪರಿಚಯ ಮಾಡಿಕೊಡ್ತಿದ್ದಾರೆ.
ಸದ್ಯ, ಜಯಶಂಕರ್ ‘ಅರಿ’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅರಿಷಡ್ವವರ್ಗಗಳ ಮೇಲೆ ಅರಿ ಸಿನಿಮಾ ತಯಾರಾಗ್ತಿದ್ದು ಇಡೀ ಟಾಲಿವುಡ್ ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ. ಈ ಟೈಮ್ ಗೆ ಡೈರೆಕ್ಟರ್ ಜಯಶಂಕರ್, ಜಾಕ್ವೆಲಿನ್ ನ ತೆಲುಗು ಸಿನಿಮಾರಂಗಕ್ಕೆ ಕರೆತರುವ ಸುದ್ದಿ ಕೊಟ್ಟು ಎಲ್ಲರಿಗೂ ಸರ್ ಪ್ರೈಸ್ ನೀಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಟಿಟೌನ್ ಕಿಂಗ್ ಅಕ್ಕಿನೇನಿ ನಾಗಾರ್ಜುನ್ ಜೊತೆ ಜಾಕಿ ಕಿಚ್ಚು ಹಚ್ಚಬೇಕಿತ್ತು. ಆದರೆ, ಹವಾಲ ಕೇಸ್ ನಲ್ಲಿ ಜೈಲು ಸೇರಿದ ಸುಕೇಶ್ ಚಂದ್ರಶೇಖರ್ ಜೊತೆ ಜಾಕಿ ಸಂಪರ್ಕ ಇಟ್ಕೊಂಡಿದ್ದು ಅನ್ನೋ ಆರೋಪದಿಂದಾಗಿ ಜಾಕ್ವೆಲಿನ್ ಘೋಸ್ಟ್ ಸಿನಿಮಾದಿಂದ ದೂರ ಉಳಿದರು. ಈಗ ಮಹಿಳಾ ಪ್ರಧಾನ ಸಿನಿಮಾದ ಮೂಲಕ ಟಾಲಿವುಡ್ ಅಂಗಳಕ್ಕೆ ಬಲಗಾಲಿಟ್ಟು ಬರ್ತಿದ್ದಾರೆ.