ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳ ಮೇಲೆ ಇರೋ ಪ್ರೀತಿ ಎಲ್ಲರಿಗೂ ಗೊತ್ತಿರೋ ವಿಚಾರ. ಈಗ ಅವರಿಗೆ ಇರುವ ಅನಿಮಲ್ಸ್ ಲವ್ ಗೆ ಒಂದು ಹೆಜ್ಜೆ ಮುಂದಾಗಿದ್ದಾರೆ. ಕಾಡಾನೆಯನ್ನು ಸೆರೆ ಹಿಡಿಯುವಾಗ ಸಾವನ್ನಪ್ಪಿದ್ದ ಅರ್ಜುನ್ನ ಸ್ಮಾರಕ ಈವರೆಗೂ ಯಾವುದೇ ಕಾಮಗಾರಿ ನಡೆಯದೇ ನೆನೆಗುದಿಗೆ ಬಿದ್ದಿದೆ. ಹೀಗಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಅರ್ಜುನನಿಗೆ ತಾತ್ಕಾಲಿಕ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದಾರೆ. ಸ್ಮಾರಕಕ್ಕೆ ಬೇಕಾದ ಕಲ್ಲು, ಮಾರ್ಬಲ್ಸ್ ಎಲ್ಲ ಕಳಿಸಿಕೊಟ್ಟಿದ್ದಾರೆ. ಇತ್ತೀಚೆಗೆ ಸೂಪರ್ ಹಿಟ್ ಆಗಿದ್ದ ಕಾಟೇರ ಸಿನಿಮಾವನ್ನ ಅರ್ಜುನನಿಗೆ ಅರ್ಪಿಸಿದ್ದು ಕೂಡಾ ಇಲ್ಲಿ ನೆನೆಪಿಸಿಕೊಳ್ಳಬಹುದು.
ಮೈಸೂರು ದಸರಾದ ಅಂಬಾರಿಯನ್ನು ಅರ್ಜುನ ಆನೆಯು 8 ಬಾರಿ ಹೊತ್ತುಕೊಂಡು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿತ್ತು. ಈಗ ಕಾಡಾನೆ ದಾಳಿಯಲ್ಲಿ ಕೊನೆ ಉಸಿರೆದಿದ್ದ ಅರ್ಜುನ ಆನೆಯ ಸ್ಮಾರಕ ವಿಚಾರದಲ್ಲಿ ಚಾಲೆಂಜಿಗ್ ಸ್ಟಾರ್ ದರ್ಶನ್ ಎಂಟ್ರಿಗೆ ಅಭಿಮಾನಿಗಳು ಪುಲ್ ಖುಷ್ ಆಗಿದ್ದಾರೆ.