- ವೇದಿಕೆಯಲ್ಲಿಯೇ ನಟಿಯನ್ನು ಬಾಲಯ್ಯ ತಳ್ಳಿದ ಘಟನೆ
- ಈ ಘಟನೆ ಬಗ್ಗೆ ಯಾವುದೇ ಬೇಸರ ಇಲ್ಲ ಎಂದ ನಟಿ
- ಎಕ್ಸ್ ಖಾತೆಯಲ್ಲಿ ಬಾಲಯ್ಯ ಜತೆ ಇರುವ ವಿಡಿಯೋ ಹಂಚಿಕೊಂಡ ನಟಿ
ಬೆಂಗಳೂರು: ತೆಲುಗು ಸೂಪರ್ಸ್ಟಾರ್ ನಂದಮೂರಿ ಬಾಲಕೃಷ್ಣ ತಮ್ಮ ಚಿತ್ರ `ಗ್ಯಾಂಗ್ಸ್ ಆಫ್ ಗೋದಾವರಿ’ಪ್ರಚಾರ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ನಟಿ ಅಂಜಲಿಯನ್ನು ವೇದಿಕೆಯಲ್ಲಿಯೇ ತಳ್ಳಿದ್ದರು. ಈ ವಿಡಿಯೋವೊಂದು ಭಾರಿ ವೈರಲ್ ಆಗಿದ್ದು, ಬಾಲಯ್ಯ ಅವರು ಟ್ರೋಲ್ ಆಗಿದ್ದರು. ಆದ್ರೆ ಈ ಬಗ್ಗೆ ನಟಿ ಅಂಜಲಿ ಮೌನ ಮುರಿದಿದ್ದಾರೆ. ಎಕ್ಸ್ ಖಾತೆಯಲ್ಲಿ ಬಾಲಯ್ಯ ಜತೆ ಇರುವ ವಿಡಿಯೊ ಹಂಚಿಕೊಂಡಿದ್ದಾರೆ. ವೇದಿಕೆ ಮೇಲೆ ನಡೆದ ಘಟನೆ ಬಗ್ಗೆ ಅವರಿಗೆ ಯಾವುದೇ ಬೇಸರ ಇಲ್ಲ ಎಂದು ನಟಿ ಅಂಜಲಿ ಈ ಪೋಸ್ಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.