ತನ್ನ ಮಗುವಿಗೆ ಕೈದಿ ಬಟ್ಟೆ ಹಾಕಿಸಿ ಫೋಟೋ ಶೂಟ್ ಮಾಡಿಸಿದ್ದ ದರ್ಶನ್ ಅಭಿಮಾನಿಗೆ ಮಕ್ಕಳ ಹಕ್ಕುಗಳ ಆಯೋಗ ಬಿಗ್ ಶಾಕ್ ನೀಡಿದ್ದು ನೋಟಿಸ್ ನೀಡಲು ಮುಂದಾಗಿದೆ. ಈಗಾಗಲೆ ಘಟನೆ ಬಗ್ಗೆ ಮಾಹಿತಿ ಪಡೆದಿರುವ ಮಕ್ಕಳ ಹಕ್ಕುಗಳ ಆಯೋಗವು ಮಗುವಿನ ತಂದೆಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿರುವ ನಟ ದರ್ಶನ್ಗೆ ವಿಚಾರಾಣಾಧೀನಾ ಕೈದಿ ನಂಬರ್ 6106 ಕೊಟ್ಟಿದ್ದಾರೆ.ದರ್ಶನ್ ಅಭಿಮಾನಿಯೊಬ್ಬ ತನ್ನ ಒಂದು ವರ್ಷದ ಮಗುವಿಗೆ ನಂಬರ್ 6106 ನಂಬರ್ ಹಾಕಿ, ಕೈದಿಯ ರೀತಿಯಲ್ಲಿ ಬಿಳಿ ಡ್ರೆಸ್ ಹಾಕಿಸಿ, ಕೈ ಕೋಳ ಮಾದರಿ ಚಿತ್ರ ಬಿಡಿಸಿ ಹುಟ್ಟುಹಬ್ಬ ಮಾಡಿ, ಫೋಟೋಶೂಟ್ ಮಾಡಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಯಾಗುತ್ತಿದೆ.