ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಜಾಮೀನು ಪಡೆಯಲು ಹರಸಾಹಸ ಪಡುತ್ತಿದ್ದರಂತೆ. ಜೈಲಿನಿಂದಲೇ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಫೋನ್ ಮಾಡಿ ಜಾಮೀನು ಕೊಡಿಸುವಂತೆ ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಖೈದಿಗಳಿಗೆ ವಾರಕ್ಕೆ ಮೂರು ಬಾರಿ ಕರೆ ಮಾಡುವ ಅವಕಾಶ ಇದೆ. ಆ ಮೂರು ಬಾರಿಯೂ ದರ್ಶನ್ ನಿರ್ಮಾಪಕರಿಗೆ ಕರೆ ಮಾಡಿದ್ದಾರಂತೆ. ಇದರ ಜೊತೆಗೆ ಅಕ್ಕ-ಪಕ್ಕದ ಕೈದಿಗಳ ಫೋನ್ ಲಿಮಿಟ್ ಕೂಡ ದರ್ಶನ್ ಬಳಸಿಕೊಂಡಿದ್ದಾರೆ ಎನ್ನಲಾಗಿದೆ.