ಕಳೆದ ವರ್ಷ ಕೆಲವು ಕಾರಣಗಳಿಂದ ನಡೆಯಬೇಕಿದ್ದ ಫಿಲ್ಮ್ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿರಲಿಲ್ಲ. ಇದೀಗ 68ನೇ ಫಿಲ್ಮ್ಫೇರ್ ಪ್ರಶಸ್ತಿ ಅನೌನ್ಸ್ ಆಗಿದೆ. ಇದರಿಂದಾಗಿ 2023ನೇ ಸಾಲಿನ ದಕ್ಷಿಣ ಭಾರತದ ಪ್ರಶಸ್ತಿಗಳು ಹೊರಬಿದ್ದಿವೆ. ಅತ್ಯುತ್ತಮ ನಟ-ನಟಿಯರು, ನಿರ್ದೇಶಕರು, ಸಿನಿಮಾ, ಮ್ಯೂಸಿಕ್ ಡೈರೆಕ್ಟರ್ಗಳು, ತಂತ್ರಜ್ಷರು ಸೇರಿದಂತೆ ಹಲವು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. 2023ನೇ ಸಾಲಿನ ಪ್ರಶಸ್ತಿಯನ್ನು ಫಿಲ್ಮ್ಫೇರ್ ಡಿಜಿಟಲ್ ಮಾಧ್ಯಮದ ಮೂಲಕ ರಿವೀಲ್ ಮಾಡಲಾಗಿದೆ.
ಸ್ಯಾಂಡಲ್ವುಡ್ನ ಹಲವು ಚಿತ್ರಗಳು 2023ನೇ ಸಾಲಿನಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿದ್ದವು. ಆ ವೇಳೆ ಪ್ರೇಕ್ಷಕರ ಮನಗೆದ್ದ ಸಿನಿಮಾಗಳನ್ನು ಮುಂದಿಟ್ಟುಕೊಂಡು 68ನೇ ಫಿಲ್ಮ್ ಫೇರ್ ಪ್ರಶಸ್ತಿ ಗೆದ್ದವರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಶಸ್ತಿಗಳ ಪಟ್ಟಿಯಲ್ಲಿ ಹಲವು ಸಿನಿಮಾಗಳು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ಫಿಲ್ಮ್ಫೇರ್ 2023ರ ಕನ್ನಡ ಪ್ರಶಸ್ತಿಗಳ ಪಟ್ಟಿ
ಅತ್ಯುತ್ತಮ ಚಿತ್ರ : ರಿಷಬ್ ಶೆಟ್ಟಿ ನಿರ್ದೇಶನದ : ʻಕಾಂತಾರʻ
ಅತ್ಯುತ್ತಮ ನಿರ್ದೇಶಕ : ಕಿರಣ್ರಾಜ್ ಕೆ ಕೆ ( ಚಾರ್ಲಿ777)
ಅತ್ಯುತ್ತಮ ಸಿನಿಮಾ :(ಕ್ರಿಟಿಕ್ಸ್) ಧರಣಿ ಮಂಡಲ ಮಧ್ಯದೊಳಗೆ (ಶ್ರೀಧರ್ ಶಿಕಾರಿಪುರ)
ಅತ್ಯುತ್ತಮ ನಟ ; ರಿಷಬ್ ಶೆಟ್ಟಿ (ಕಾಂತಾರ)
ಅತ್ಯುತ್ತಮ ನಟ: (ಕ್ರಿಟಿಕ್ಸ್) ನವೀನ್ ಶಂಕರ್ ( ಧರಣಿ ಮಂಡಲ ಮಧ್ಯದೊಳಗೆ )
ಅತ್ಯುತ್ತಮ ನಟಿ: ಚೈತ್ರಾ ಜೆ ಆಚಾರ್ ( ತಲೆದಂಡ)
ಅತ್ಯುತ್ತಮ ನಟಿ: (ಕ್ರಿಟಿಕ್ಸ್) ಸಪ್ತಮಿ ಗೌಡ ( ಕಾಂತಾರ)
ಅತ್ಯುತ್ತಮ ಪೋಷಕ ನಟ : ಅಚ್ಯುತ್ ರಾವ್ ( ಕಾಂತಾರ)
ಅತ್ಯುತ್ತಮ ಪೋಷಕ ನಟಿ: ಮಂಗಳ ಎನ್ ( ತಲೆದಂಡ)
ಅತ್ಯುತ್ತಮ ಮ್ಯೂಸಿಕ್ ಅಲ್ಬಮ್: ಬಿ ಅಜನೀಶ್ ಲೋಕನಾಥ್ (ಕಾಂತಾರ)
ಅತ್ಯುತ್ತಮ ಸಾಹಿತ್ಯ :ವಿ.ನಾಗೇಂದ್ರ ಪ್ರಸಾದ್ (ಬೆಳಕಿನ ಕವಿತೆ-ಬನಾರಸ್)
ಅತ್ಯುತ್ತಮ ಗಾಯಕ; ಸಾಯಿ ವಿಘ್ನೇಶ್ (ವರಾಹ ರೂಪಂ-ಕಾಂತಾರ)
ಅತ್ಯುತ್ತಮ ಗಾಯಕಿ; ಸುನಿಧಿ ಚೌಹಾಣ್ (ರಾ ರಾ ರಕ್ಕಮ್ಮ-ವಿಕ್ರಾಂತ್ ರೋಣ)