ಕನ್ನಡ ಕಿರುತೆರೆಯಲ್ಲಿ ದೊಡ್ಡ ಮಟ್ಟದ ಸೌಂಡ್ ಮಾಡಿದ್ದ ‘ಮಹಾನಟಿ’ಶೋ ಕೊನೆಗೂ ತೆರೆ ಕಂಡಿದೆ. ಗ್ರ್ಯಾಂಡ್ ಫಿನಾಲೆಗೆ ಐದು ಫೈನಲಿಸ್ಟ್ಗಳು ವೇದಿಕೆಗೆ ತಲುಪಿದ್ದರು. ಗಗನಾ, ಶ್ವೇತಾ ಭಟ್, ಧನ್ಯಶ್ರೀ, ಪ್ರಿಯಾಂಕ ಆಚಾರ್ ಹಾಗೂ ಆರಾಧನಾ ಭಟ್ ಫಿನಾಲೆ ವೇದಿಕೆಯಲ್ಲಿ ಇದ್ದರು. ಆದರೆ ಐವರಲ್ಲಿ ಪ್ರಿಯಾಂಕ ಆಚಾರ್ ಅವರಿಗೆ ಮಹಾನಟಿ ಚಿನ್ನದ ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಮಹಾನಟಿ ರಿಯಾಲಿಟಿ ಶೋನ ಸ್ಪರ್ಧಿಗಳು ಶಾರ್ಟ್ ಫಿಲ್ಮ್ನಲ್ಲಿ ನಟಿಸಿ ಸೈ ಎಂದೆನಿಸಿಕೊಂಡಿದ್ದರು. ಇದೀಗ ಒಟ್ಟು ಫೈನಲಿಸ್ಟ್ಗಳಲ್ಲಿ ಪ್ರಿಯಾಂಕ ಆಚಾರ್ ಚಿನ್ನದ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಪ್ರಿಯಾಂಕ ಅವರು ವಿನ್ನರ್ ಪಟ್ಟ ಗಿಟ್ಟಿಸಿಕೊಳ್ಳುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ವೇದಿಕೆ ಮೇಲೆಯೇ ಪ್ರಿಯಾಂಕ ಅವರನ್ನು ನೋಡಲು ಅಭಿಮಾನಿಗಳ ಸಂಘ ಬಂದಿತ್ತು. ಅದರಲ್ಲಿ ಸಹ ಸ್ಪರ್ಧಿ ಧನ್ಯಶ್ರೀ ಅವರ ತಂದೆಯೇ ಪ್ರಿಯಾಂಕ ಅವರ ಅಭಿಮಾನಿ ಸಂಘದ ಮುಖ್ಯಸ್ಥರಾಗಿದ್ದರು. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ ಅವರ ಹೊಸ ಹೊಸ ಫ್ಯಾನ್ ಪೇಜ್ ಕ್ರಿಯೇಟ್ ಮಾಡಿ ಶುಭ ಹಾರೈಸುತ್ತಿದ್ದಾರೆ. ಆದಷ್ಟೂ ಬೇಗ ಬೆಳ್ಳಿತೆರೆಗೆ ಎಂಟ್ರಿ ಕೊಡಿ ಅಂತ ಹಾರೈಸಿದ್ದಾರೆ.
ಐದು ಫೈನಲಿಸ್ಟ್ಗಳಲ್ಲಿ ಕೊನೆಗೆ ವೇದಿಕೆ ಮೇಲೆ ಉಳಿದಿದ್ದು ಕೇವಲ ಇಬ್ಬರು ಮಾತ್ರ. ಕೊನೆಯದಾಗಿ ನಟ ರಮೇಶ್ ಅರವಿಂದ್ ಅವರು ಪ್ರಿಯಾಂಕ ಹೆಸರ ಕೈ ಮೇಲೆ ಎತ್ತಿ ವಿನ್ನರ್ ಹೆಸರು ಘೋಷಿಸಿದ್ದರು. ಇದಾದ ಬಳಿಕ ಪ್ರಿಯಾಂಕಗೆ 15 ಲಕ್ಷದ ಪ್ಯೂರ್ ಚಿನ್ನದ ಕಿರೀಟ ಸಿಕ್ಕಿದೆ. ಎರಡನೇ ಸ್ಥಾನ ಪಡೆದ ಧನ್ಯಶ್ರೀಗೆ 10 ಲಕ್ಷ ನಗದು ಬಹುಮಾನ ಸಿಕ್ಕಿದೆ. ಮೂರನೇ ಸ್ಥಾನ ಪಡೆದ ಚಿತ್ರದುರ್ಗದ ಗಗನ, ನಾಲ್ಕನೇ ಸ್ಥಾನ ಪಡೆದ ಆರಾಧನಾ ಭಟ್, ಐದನೇ ಸ್ಥಾನ ಶ್ವೇತಾ ಭಟ್ಗೆ ತಲಾ ಒಂದು ಲಕ್ಷ ಬಹುಮಾನ ನೀಡಲಾಯಿತು.