- ರಶ್ಮಿಕಾ ಬಳಿಕ ಸಕ್ಸಸ್ ಗಾಗಿ ಪೂಜೆ ಮಾಡಿಸಿದ ನಿಶ್ವಿಕಾ
- ಖ್ಯಾತ ಜ್ಯೋತಿಷಿ ಬಳಿ ವಿಶೇಷ ಪೂಜೆ ಮಾಡಿಸಿದ ನಿಶ್ವಿಕಾ ನಾಯ್ಡು
ಸ್ಯಾಂಡಲ್ವುಡ್ನ ಜಂಟಲ್ಮ್ಯಾನ್ ಸಿನಿಮಾ ಖ್ಯಾತಿಯ ನಟಿ ನಿಶ್ವಿಕಾ ನಾಯ್ಡು ಇದೀಗ ರಶ್ಮಿಕಾ ಮಂದಣ್ಣ ಹಾದಿಯಲ್ಲೇ ಹೆಜ್ಜೆ ಇಡುತ್ತಿದ್ದಾರೆ.
ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಬಳಿ ಸಕ್ಸಸ್ಗಾಗಿ ನಿಶ್ವಿಕಾ ಕೂಡ ಪೂಜೆ ಮಾಡಿಸಿದ್ದಾರೆ. ಇದರ ವಿಡಿಯೋವನ್ನು ಜ್ಯೋತಿಷಿ ಹಂಚಿಕೊಂಡಿದ್ದಾರೆ.
ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ ನಿಶ್ವಿಕಾ ಈಗ ವೇಣು ಸ್ವಾಮಿ ಬಳಿ ವಿಶೇಷ ಪೂಜೆ ಮಾಡಿಸಿದ್ದಾರೆ.
ಪೂಜೆಯ ಕಾರ್ಯದ ಬಳಿಕ ನಟಿಯ ಕುರಿತು ಮಾತನಾಡಿರುವ ವೇಣು ಸ್ವಾಮಿ, ನಿಶ್ವಿಕಾ ಕನ್ನಡದ ನಟಿ, ಸಾಕಷ್ಟು ಖ್ಯಾತಿ ಪಡೆದುಕೊಂಡಿದ್ದಾರೆ. ಪ್ರಭುದೇವ ಅವರೊಂದಿಗೆ ಡ್ಯಾನ್ಸ್ ಮಾಡೋದು ಸುಮ್ಮನೆ ಅಲ್ಲ. ಪ್ರಭುದೇವ ಅವರಿಗೆ ಸಮವಾಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ನಿಶ್ವಿಕಾ ತೆಲುಗಿಗೆ ಎಂಟ್ರಿ ಕೊಡಲಿದ್ದಾರೆ. ನಿಶ್ವಿಕಾಗೆ ಶುಭವಾಗಲಿ ಎಂದಿದ್ದಾರೆ.