- ಕೊಲೆಯಾದ ಸ್ಥಳ ಮಹಜರು ಮಾಡಲು ಆರೋಪಿಗಳನ್ನು ಕರೆದೊಯ್ದ ಪೊಲೀಸರು
- ಪವಿತ್ರ ಗೌಡ ಅಳುತ್ತಿದ್ದರು ಸಹ ಕಣ್ಣೆತ್ತಿ ನೋಡದ ದರ್ಶನ್
ರೇಣುಕಾಸ್ವಾಮಿ ಕೊಲೆ ಪ್ರಕರಣ ತಿರುವುಗಳ ಮೇಲೆ ತಿರುವುಗಳು ಸಿಗುತ್ತಿದೆ. ಈಗಾಗಲೇ ನಟ ದರ್ಶನ್, ಪವಿತ್ರ ಗೌಡ ಸೇರಿದಂತೆ 13 ಆರೋಪಿಗಳನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಆರೋಪಿಗಳ ಬಾಯಿಂದ ಪೊಲೀಸ್ ಅಧಿಕಾರಿಗಳು ಒಂದೊಂದೇ ವಿಚಾರವನ್ನು ಬಯಲಿಗೆ ಎಳೆಯುತ್ತಿದ್ದಾರೆ.
ರೇಣುಕಾಸ್ವಾಮಿಯ ಕೊಲೆ ನಡೆದ ಸ್ಥಳವಾದ ಆರ್. ಆರ್ ನಗರದ ಪಟ್ಟಣಗೆರೆಗೆ ಎಲ್ಲಾ ಆರೋಪಿಗಳನ್ನು ಪೊಲೀಸರು ಸ್ಥಳ ಮಹಜರು ಮಾಡೋಕೆ ಕರೆದೊಯ್ದರು. ರೇಣುಕಾಸ್ವಾಮಿಯನ್ನು ಬರ್ಬರವಾಗಿ ಕೊಲೆ ಮಾಡಿದ ಆರೋಪಿಗಳು ಹೇಗೆ ಹತ್ಯೆ ಮಾಡಿದ್ರು ಅಂತ, ಪೊಲೀಸ್ ಅಧಿಕಾರಿಗಳು ಆ ಘಟನೆಯನ್ನು ಮರು ಸೃಷ್ಟಿ ಮಾಡಿಸುತ್ತಿದ್ದಾರೆ. ಇನ್ನು ಪೊಲೀಸರ ವಿಚಾರಣೆಗೆ ಸಾಥ್ ನೀಡುತ್ತಿರುವ ಆರೋಪಿಗಳು ಘಟನೆ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡುತ್ತಿದ್ದಾರೆ. ಈ ವೇಳೆ ಒಂದು ಕಡೆ ಕೈ ಕಟ್ಟಿ ನಿಂತುಕೊಂಡಿರುವ ದರ್ಶನ್ ಪಕ್ಕದಲ್ಲೇ ಪವಿತ್ರಾ ಗೌಡ ನಿಂತಿದ್ದಾರೆ. ಪವಿತ್ರ ನಿರಂತರವಾಗಿ ಅಳುತ್ತಿದ್ದರು ಸಹ ದರ್ಶನ್ ಅವರನ್ನು ನೋಡಿ ತಲೆ ತಗ್ಗಿಸಿಕೊಂಡು ನಿಂತುಕೊಂಡರು. ಮತ್ತೊಂದು ಕಡೆ ಆರೋಪಿ ನಾಗ ಅಳುತ್ತಿರುವುದನ್ನು ನೋಡಿದ ದರ್ಶನ್ ಬೇಸರಗೊಂಡರು.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಒಟ್ಟು 13 ಆರೋಪಿಗಳು ಭಾಗಿ
A1 ಪವಿತ್ರ ಗೌಡಾ (33)
A2 ದರ್ಶನ್ (47)
A3 ಪವನ್ (29)
A4 ರಾಘವೇಂದ್ರ (43)
A5 ನಂದೀಶ (28)
A6 ಜಗದೀಶ
A7 ಅನು
A8 ರವಿ
A9 ರಾಜು
A10 ವಿನಯ್ (38)
A11 ನಾಗರಾಜು (41)
A12 ಲಕ್ಷ್ಮಣ (54)
A13 ದೀಪಕ್ (39)