- ಕಿರುತೆರೆಯಲ್ಲಿ ಛಾಪು ಮೂಡಿಸಿ ಜನಪ್ರಿಯತೆ ಪಡೆದ ವೈಷ್ಣವಿ ಗೌಡ
- ಕಿರುತೆರೆ ನಟಿ ವೈಷ್ಣವಿ ಗೌಡ ಅವರಿಗೆ ಈ ಡೀಪ್ ಫೇಕ್ ಕಾಟ ಶುರು
ಅಗ್ನಿ ಸಾಕ್ಷಿ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಅವರದ್ದೇ ಛಾಪು ಮೂಡಿಸಿ ಜನಪ್ರಿಯತೆ ಪಡೆದ ವೈಷ್ಣವಿ ಗೌಡ. ಸದ್ಯ ಇವರು ಸೀತಾ ರಾಮ ಸೀರಿಯಲ್ ನಲ್ಲಿ ಸೀತಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಸೀತಮ್ಮ ಪಾತ್ರದ ಮೂಲಕ ಮನೆ ಮಾತಾಗಿದ್ದಾರೆ.
ಇವರು ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ. ಫೋಟೋಶೂಟ್ ಗಳ ಮೂಲಕ ಅಭಿಮಾನಿಗಳ ಮನಸ್ಸು ಖದಿಯುತ್ತಿರುವ ವೈಷ್ಣವಿ ಗೌಡ ಈಗ ಒಂದು ಫೋಟೋಯಿಂದ ಸುದ್ದಿಯಾಗಿದ್ದಾರೆ.
ಇತ್ತೀಚಿಗೆ ನಟ ನಟಿಯರಿಗಂತೂ ಡೀಪ್ ಫೇಕ್ ವಿಡಿಯೋಗಳ ಹಾವಳಿ ಹೆಚ್ಚಾಗಿದೆ. ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸಹಾ ಈ ಡೀಪ್ ಫೇಕ್ ವಿಡಿಯೋ ಹಾವಳಿಗೆ ತುತ್ತಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಲೋಕಸಭಾ ಚುನಾವಣೆಯ ವೇಳೆ ಕೂಡ ಅಮಿರ್ ಖಾನ್, ಅಲ್ಲೂ ಅರ್ಜುನ್ ರಣವೀರ್ ಸಿಂಗ್ ಹೀಗೆ ಆನೇಕ ಸ್ಟಾರ್ ನಟರು ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿರುವ ಡೀಪ್ ಫೇಕ್ ವಿಡಿಯೋಗಳು ಸಖತ್ ಸುದ್ದಿಯಾಗಿತ್ತು.
ಈಗ ಕಿರುತೆರೆ ನಟಿ ವೈಷ್ಣವಿ ಗೌಡ ಅವರಿಗೆ ಈ ಡೀಪ್ ಫೇಕ್ ಕಾಟ ಶುರುವಾಗಿದೆ. ಕೆಲ ಕಿಡಿಗೇಡಿಗಳು ಅವರಿಗೆ ಬೇಕಾದ ರೀತಿಯಲ್ಲಿ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದನ್ನು ನೋಡಿದ ವೈಷ್ಣವಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇದು ಡೀಪ್ ಫೇಕ್ ಫೋಟೋ ಎಂದು ತಿಳಿಯದ ಕೆಲವರು ವೈಷ್ಣವಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಸೀತಮ್ಮ ಇಷ್ಟು ಕೆಟ್ಟದಾಗಿ ಬಟ್ಟೆ ಹಾಕಿ ಪೋಸ್ಟ್ ಮಾಡಿದ್ದೀರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದ್ರೆ ವೈಷ್ಣವಿ ಗೌಡ ಇದರ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.