- ಇಂದು ವಿಶ್ವ ತಂದೆಯಂದಿರ ದಿನ
- ಐ ಲವ್ ಯೂ… ನೀವೇ ನನ್ನ ಹೀರೋ ಅಪ್ಪ
- ಅಪ್ಪನಿಗೆ ವಿಶ್ ಮಾಡಿದ ದರ್ಶನ್ ಪುತ್ರ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಿರುವಾಗ ಇಂದು ವಿಶ್ವ ತಂದೆಯಂದಿರ ದಿನವಾಗಿದ್ದು, ಐ ಲವ್ ಯೂ ಯಾವಾಗಲೂ, ನೀವೇ ನನ್ನ ಹೀರೋ ಅಪ್ಪ ಎಂದು ದರ್ಶನ್ಗೆ ಪ್ರೀತಿಯಿಂದ ವಿನೀಶ್ ವಿಶ್ ಮಾಡಿದ್ದಾರೆ. ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿರುವುದಕ್ಕೆ ವಿನೀಶ್ ಭಾವುಕರಾಗಿ ವಿಶ್ ಮಾಡಿದ್ದಾರೆ.
ಹ್ಯಾಪಿ ಫಾದರ್ಸ್ ಡೇ ಅಪ್ಪ. ನಾನು ನಿಮ್ಮನ್ನು ಬಹಳ ಮಿಸ್ ಮಾಡಿಕೊಳ್ಳುತ್ತಿದ್ದೀನಿ. ಐ ಲವ್ ಯು.. ಯಾವಾಗಲೂ ನೀವೇ ನನ್ನ ಹೀರೋ ಎಂದು ವಿನೀಶ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ತಂದೆಯ ಜೊತೆಗಿನ ಕೆಲ ಪೋಟೋಗಳನ್ನು ಶೇರ್ ಮಾಡಿದ್ದಾರೆ.