- ಈ ನಟ ಯಾರ ಮನೆಯನ್ನು ಉದ್ಧಾರ ಮಾಡುವುದಿಲ್ಲ
- ಕೊಲೆ ಮಾಡಿದ್ದಕ್ಕೆ ಕನ್ನಡ ಫಿಲ್ಮ್ ಚೇಂಬರ್ 5 ಲಕ್ಷ ರೂಪಾಯಿ ಫೈನ್ ಕಟ್ಟುವಂತಾಯ್ತು
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ಗೆ ಸಂಬಂಧಿಸಿದಂತೆ ಗ್ಯಾರಂಟಿ ನ್ಯೂಸ್ ಜೊತೆಗೆ ಭಾಮಾ ಹರೀಶ್ ಮಾತನಾಡಿದರು. ಈ ನಟ ಯಾರ ಮನೆಯನ್ನು ಉದ್ಧಾರ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ದರ್ಶನ್ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೋ ಇಲ್ಲವೋ ಎಂದು ಪೊಲೀಸರು ತನಿಖೆ ಮಾಡ್ತಾ ಇದ್ದಾರೆ. ಪೊಲೀಸರ ಜೊತೆಗೆ ಮಾಧ್ಯಮದವರು ಇದ್ದಾರೆ. ಈ ಪ್ರಕರಣ ಕರ್ನಾಟಕ ಜನತೆ, ಕನ್ನಡ ಸಿನಿಮಾ ಕೂಡ ಎದುರು ನೋಡ್ತಾ ಇದೆ. ನ್ಯಾಯ ಖಂಡಿತವಾಗಿಯೂ ಸಿಕ್ಕೇ ಸಿಗುತ್ತೆ ಎಂದು ನಂಬಿದಿನಿ. ಆ ಕುಟುಂಬಕ್ಕೆ ಒಳ್ಳೆಯದಾಗಲಿ. ಯಾಕಂದ್ರೆ ರೇಣುಕಾಸ್ವಾಮಿ ಹೆಂಡತಿ 5 ತಿಂಗಳ ಗರ್ಭಿಣಿ ಅನ್ಸುತ್ತೆ. ವಯಸ್ಸಾದ ತಂದೆ, ತಾಯಿ, ಅಜ್ಜಿ ಇದ್ದಾರೆ ಎಂದು ಬಾ.ಮಾ. ಹರೀಶ್ ಹೇಳಿದ್ದಾರೆ.
ನಂತರ ಮಾತನಾಡಿದ ಅವರು ರೇಣುಕಾಸ್ವಾಮಿ ಮನೆಗೆ ಹೋಗಿ ಕನ್ನಡ ಫಿಲ್ಮ್ ಚೇಂಬರ್ನ ಮುಖಂಡರ ಮೂಲಕ ಕುಟುಂಬಕ್ಕೆ 5 ಲಕ್ಷ ರೂಪಾಯಿ ತಲುಪಿಸಿ ಬಂದಿದ್ದಾರೆ. ನೋಡಿ ಇಲ್ಲೂ ಸಹ ದರ್ಶನ್ ಕೊಲೆ ಮಾಡಿದ್ದಕ್ಕೆ ಕನ್ನಡ ಫಿಲ್ಮ್ ಚೇಂಬರ್ 5 ಲಕ್ಷ ರೂಪಾಯಿ ಫೈನ್ ಕಟ್ಟುವಂತಾಯ್ತು ಎಂದು ಬಾ.ಮಾ. ಹರೀಶ್ ಹೇಳಿದ್ದಾರೆ.