- ದುನಿಯಾ ವಿಜಯ್ ಫ್ಯಾನ್ಸ್ಗೆ ಗುಡ್ನ್ಯೂಸ್
- ಭೀಮ ಸಿನಿಮಾ ಆಗಸ್ಟ್ 9ರಂದು ರಿಲೀಸ್
ದುನಿಯಾ ವಿಜಯ್ ಫ್ಯಾನ್ಸ್ಗೆ ಗುಡ್ನ್ಯೂಸ್ ಸಿಕ್ಕಿದೆ. ‘ದುನಿಯಾ’ವಿಜಯ್ ಅವರು ‘ಭೀಮ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಯಾವಾಗ ರಿಲೀಸ್ ಆಗಲಿದೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ದುನಿಯಾ ವಿಜಯ್ ಅವರೇ ಉತ್ತರ ಕೊಟ್ಟಿದ್ದಾರೆ. ಈ ಸಿನಿಮಾ ಆಗಸ್ಟ್ 9ರಂದು ರಿಲೀಸ್ ಆಗಲಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಫುಲ್ ಖುಷಿಪಟ್ಟಿದ್ದಾರೆ.
ವಿಜಯ್ ಅವರು ‘ಸಲಗ’ಸಿನಿಮಾ ನಿರ್ದೇಶನ ಮಾಡಿ ನಟಿಸಿದ್ದರು. ಇದು ಅವರ ನಿರ್ದೇಶನದ ಮೊದಲ ಸಿನಿಮಾ. ಮೊದಲ ಚಿತ್ರದಲ್ಲೇ ಅವರಿಗೆ ಗೆಲುವಿನ ರುಚಿ ಸಿಕ್ಕಿತ್ತು. ಈ ಚಿತ್ರ ರೌಡಿಸಂ ಕಥೆಯನ್ನು ಹೊಂದಿದ್ದು, ಈಗ ಅದೇ ರೀತಿಯ ಥೀಮ್ ಇಟ್ಟುಕೊಂಡು ‘ಭೀಮ’ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವನ್ನು ಆಗಸ್ಟ್ 9ರಂದು ರಿಲೀಸ್ ಮಾಡಲಿದ್ದಾರೆ.