ಕುಂದಾಪುರದ ಕೃಷ್ಣ ಸುಂದರಿ ಬಿಗ್ ಬಾಸ್ ಬೆಡಗಿ ಭೂಮಿಶೆಟ್ಟಿ ಸಿಕ್ಕಾಪಟ್ಟೆ ಬೋಲ್ಡ್ ಹುಡುಗಿ. ಯಾರು ಏನೇ ಹೇಳಲಿ. ಯಾರು ಏನಾದರೂ ಅಂದುಕೊಳ್ಳಲಿ. ನಾನು ಇರುವುದೇ ಹೀಗೆ ಅನ್ನೋ ಆ್ಯಟಿಟ್ಯೂಡ್ ಭೂಮಿ ಶೆಟ್ಟಿ ಅವರದ್ದು. ಸೀರೆಗೂ ಸೈ. ಪಾರ್ಟಿ ವೇರ್ ಡ್ರೆಸ್ ಗಳಿಗೂ ಜೈ ಅನ್ನುವ ಭೂಮಿ ಶೆಟ್ಟಿ ಆಗಾಗ ಹಾಟ್ ಫೋಟೋಗಳನ್ನ. ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ತಾಯಿದ್ದಾರೆ.
ಈಗ ಮತ್ತೊಮ್ಮೆ ಹಾಟ್ ಅವತಾರದ ಮೂಲಕ ಭೂಮಿ ಸುದ್ದಿಯಲ್ಲಿದ್ದಾರೆ. ಭೂಮಿ ಶೆಟ್ಟಿಯ ಹೊಸ ಫೋಟೋಗಳು ಸಖತ್ ವೈರಲ್ ಆಗ್ತಾಯಿವೆ.
ಸದ್ಯ ತುಂಡುಡುಗೆಯ ಫೋಟೋಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.. ಇನ್ನೂ ಭೂಮಿ ಶೆಟ್ಟಿಯ ಹಾಟ್ ಅವತಾರ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ. ಕಮೆಂಟ್ ಗಳ ಸುರಿಮಳೆಯೂ ಕೂಡ ಆಗ್ತಿದೆ. ಕೆಲವರು ಭೂಮಿ ಶೆಟ್ಟಿ ಅವರ ಸೌಂದರ್ಯಕ್ಕೆ ಮನ ಸೋತರೆ, ಇನ್ನೂ ಕೆಲವರು ಕಿಡಿಕಾರುತ್ತಿದ್ದಾರೆ.
ಭೂಮಿ ಶೆಟ್ಟಿಯ ಬಟ್ಟೆಯನ್ನ ಸೊಳ್ಳೆ ಪರದೆಗೆ ಹೋಲಿಸಿದ್ದಾರೆ. ಆದರೆ ಭೂಮಿ ಶೆಟ್ಟಿ ತಮ್ಮ ಈ ಹೊಸ ರೂಪಕ್ಕೆ ಬರ್ತಾಯಿರೋ ನೆಗೆಟಿವ್ ಕಮೆಂಟ್ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಯಾಕೆಂದರೆ ಯಾರು ಏನೇ ಹೇಳಲಿ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಅಂತ ಭೂಮಿ ಈ ಹಿಂದೆ ಹೇಳಿದ್ದರು.