ಬಿಗ್ಬಾಸ್ ತೆಲುಗು ಸೀಸನ್ 8 ರ ವಿಜೇತರಾಗಿ ಕನ್ನಡಿಗ ನಿಖಿಲ್ ಮಳಿಯಕ್ಕಲ್ ಅವರು ದಾಖಲೆ ಬರೆದಿದ್ದಾರೆ. ಬಿಗ್ಬಾಸ್ ಇತಿಹಾಸದಲ್ಲೇ ಅತೀ ಹೆಚ್ಚು ಪ್ರೈಜ್ ಮನಿ ಗೆದ್ದ ಸ್ಪರ್ಧಿ ಎಂದು ಎನಿಸಿಕೊಂಡಿದ್ದಾರೆ. ಮೈಸೂರು ಮೂಲದ ನಿಖಿಲ್ ಬರೋಬ್ಬರಿ 55 ಲಕ್ಷ ರೂ. ಪ್ರೈಜ್ ಮನಿ ಜೊತೆಗೆ ತೆಲುಗು ಬಿಗ್ಬಾಸ್ 8ನೇ ಸೀಸನ್ನ ಟ್ರೋಫಿ ಕೂಡ ಗೆದ್ದಿದ್ದಾರೆ.
ನಿಖಿಲ್ ಮಳಿಯಕ್ಕಲ್ ವಿನ್ನರ್ ಎಂದು ಅನೌನ್ಸ್ ಆಗುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇದೇ ಬಿಗ್ಬಾಸ್ ಶೋನಿಂದ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಇನ್ನು ಈ ಬಗ್ಗೆ ಮಾತನಾಡಿದ ನಿಖಿಲ್ ಮಳಿಯಕ್ಕಲ್, ನನಗೂ ಕನ್ನಡದಲ್ಲಿ ನಟನೆ ಮಾಡಲು ತುಂಬಾ ಇಷ್ಟ ಇದೆ. ಭವಿಷ್ಯದಲ್ಲಿ ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ಒಳ್ಳೆಯ ಪ್ರಾಜೆಕ್ಟ್ನೊಂದಿಗೆ ಬರುತ್ತೇನೆ. ಇಲ್ಲಿಯವರೆಗೂ ನನಗೆ ಕನ್ನಡದ ಬಿಗ್ಬಾಸ್ನಿಂದ ಯಾವುದೇ ಕರೆ ಬಂದಿಲ್ಲ. ಮತ್ತೆ ಬಿಗ್ಬಾಸ್ನಿಂದ ಕಾಲ್ ಬಂದ್ರೆ ಹೋಗುವುದು ಕಷ್ಟ. ತೆಲುಗು ಬಿಗ್ಬಾಸ್ನಲ್ಲಿ 100 ದಿನದ ಮೇಲೆ ಇದ್ದೇನೆ ಅಂದ್ರೆ ನನಗೆ ನಂಬೋಕೆ ಆಗ್ತಿಲ್ಲ. ಇನ್ನೊಂದು ಸರಿ ಅವಕಾಶ ಬಂದ್ರೆ ನೋಡುತ್ತೇನೆ. ನನಗೆ ಸಿನಿಮಾ, ಸೀರಿಯಲ್ ಮಾಡಬೇಕು ಅಂತ ಇದೆ ಮುಂದೆ ನೋಡಬೇಕು ಅಂತ ಹೇಳಿದ್ದಾರೆ.