ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಈಗ ಮಗುವಿನ ಆರೈಕೆಯಲ್ಲಿ ಸಮಯ ಕಳೆಯುತ್ತಿದ್ದಾರೆ. ಸಪ್ಟೆಂಬರ್ 8 ರಂದು ದೀಪಿಕಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಹಸುಗೂಸಿನ ತಾಯಿ ಅಂದಮೇಲೆ ಕೆಲವು ದಿನಗಳ ಮಟ್ಟಿಗೆ ಮಗುವಿನ ಕಡೆ ಮಾತ್ರ ಗಮನ ಕೊಡುವುದು ತಾಯಿ ಕರ್ತವ್ಯ. ನಟನಾ ವೃತ್ತಿಯಲ್ಲಿ ಬಹಳವೇ ಬ್ಯುಸಿ ಇದ್ದ ದೀಪಿಕಾ ಈಗ ಮನೆಯಲ್ಲಿಯೇ ಇರುವ ಸಂದರ್ಭ ಬಂದಿದೆ. ಹೀಗಾಗಿ ಪತಿಯನ್ನ ಮಿಸ್ ಮಾಡಿಕೊಳ್ಳುವುದು ಸಾಮಾನ್ಯ. ಆದರೀಗ ಪತಿ ಮೇಲೆ ದೀಪಿಕಾ ಕಂಪ್ಲೆಂಟ್ ಮಾಡಿದ್ದಾರೆ.
ಮನೆಗೆ 5 ಗಂಟೆಗೆ ಬರುತ್ತೇನೆ ಎಂದಿದ್ದ ಪತಿ ರಣ್ವೀರ್ 5 ಗಂಟೆ 1 ನಿಮಿಷಕ್ಕೆ ಬಂದರೆ ಪತ್ನಿ ಪರಿಸ್ಥಿತಿ ಹೇಗಿರುತ್ತದೆ ಅನ್ನೋದನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಮುದ್ದಾದ ಮಗು ಬೈನಾಕ್ಯೂಲರ್ ಹಿಡಿದು ಕಿಟಕಿಯಿಂದ ಇಣುಕುವ ವಿಡಿಯೋ ಶೇರ್ ಮಾಡಿದ್ದಾರೆ.
ಇದರರ್ಥ ಸದ್ಯಕ್ಕೆ ದೀಪಿಕಾ ಪರಿಸ್ಥಿತಿ ಈಗ ಹೇಗಿದೆ ಅನ್ನೋದನ್ನು ವಿಡಿಯೋ ಮೂಲಕ ತಿಳಿಸಿದ್ದಾರೆ. ಬಾಣಂತಿಯಾಗಿರುವ ದೀಪಿಕಾಗೆ ಈ ಸಂದರ್ಭದಲ್ಲಿ ಪತಿಯ ಹೆಚ್ಚಿನ ಅನಿವಾರ್ಯತೆ ಕಾಡುತ್ತಿದ್ದು, ಪತಿ ಮನೆಗೆ ಬರೋದನ್ನ ಎಷ್ಟು ಕಾತುರದಿಂದ ಎದುರು ನೋಡುತ್ತಿದ್ದೇನೆ ಎಂಬುದನ್ನ ವ್ಯಂಗ್ಯವಾಗಿ ಹೇಳಿದ್ದಾರೆ. ದೀಪಿಕಾ ಪತಿ ರಣ್ವೀರ್ ಸಿಂಗ್ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವುದರಿಂದ ಹೊರಗೆ ಹೋಗುತ್ತಾರೆ. ಆದರೆ ಪತಿಗಾಗಿ ಮನೆಯಲ್ಲಿ ಎಷ್ಟು ಪರಿತಪಿಸುತ್ತಿದ್ದಾರೆ ಎಂಬುದನ್ನ ದೀಪಿಕಾ ಈ ರೀತಿಯಾಗಿ ಹೇಳಿದ್ದಾರೆ. ಡಿಲಿವೆರಿ ಬಳಿಕ ದೀಪಿಕಾ ಇನ್ಸ್ಟಾಗ್ರಾಂನಲ್ಲಿ ಹಾಕಿರುವ ಈ ಸ್ಟೋರಿ ಸಖತ್ ವೈರಲ್ ಆಗುತ್ತಿದೆ.