ಜಾನ್ಹವಿ ಕಪೂರ್ ನಟನೆಯ ಸಿನಿಮಾ ಒಂದು ಹಿಟ್ ಆಗಿ ವರ್ಷಗಳೇ ಆದವು. ಹಾಗಿದ್ದರೂ ಸಹ ನಟಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸಿನಿಮಾಗಳ ಮೂಲಕ ಮಾತ್ರವೇ ಅಲ್ಲದೆ ಜಾಹೀರಾತು, ಇನ್ಸ್ಟಾಗ್ರಾಂ ಇನ್ಫ್ಲೆಯೆನ್ಸ್, ಉದ್ದಿಮೆಗಳ ಮೇಲೆ ಹೂಡಿಕೆ ಮಾಡುವುದರಿಂದಲೂ ಸಹ ಹಣ ಗಳಿಸುತ್ತಿದ್ದಾರೆ. ಐಶಾರಾಮಿ ಜೀವನ ಪ್ರಿಯೆ ಆಗಿರುವ ಜಾನ್ಹವಿ, ಇದೀಗ ಐಶಾರಾಮಿ ಕಾರೊಂದನ್ನು ಖರೀದಿ ಮಾಡಿದ್ದಾರೆ. ಜಾನ್ಹವಿ ಕಪೂರ್ ಖರೀದಿ ಮಾಡಿರುವ ಈ ಐಶಾರಾಮಿ ಕಾರು ಸ್ಟಾರ್ ನಟ ರಣ್ಬೀರ್ ಕಪೂರ್ ಹೊರತಾಗಿ ಬಾಲಿವುಡ್ನ ಇನ್ಯಾರ ಬಳಿಯೂ ಸಹ ಇಲ್ಲ.
ಜಾನ್ಹವಿ ಕಪೂರ್, ಲೆಕ್ಸಸ್ ಎಲ್ಎಂ 350 ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಎಕ್ಸ್ ಶೋರೂಂ ಬೆಲೆ 2.50 ಕೋಟಿ. ಕಾರಿನ ನೊಂದಣಿ, ಎಕ್ಸ್ಟ್ರಾ ಫಿಟ್ಟಿಂಗ್ ಸೇರಿ ಸುಮಾರು 3 ಕೋಟಿ ರೂಪಾಯಿ ಆಗುತ್ತದೆ. ಈ ಕಾರು ನಾಲ್ಕು ಚಕ್ರದ ಮೇಲಿನ ಲಕ್ಷುರಿ ಎಂದೇ ಕರೆಯಲಾಗುತ್ತದೆ. ನಾಲ್ಕು ಸೀಟಿನ ಈ ಕಾರಿನ ಎರಡನೇ ರೋ ಅತ್ಯಂತ ಐಶಾರಾಮಿ ಸೌಲಭ್ಯಗಳನ್ನು ಒಳಗೊಂಡಿದೆ. ಕ್ಯಾಪ್ಟನ್ ಸೀಟುಗಳನ್ನು ಒಳಗೊಂಡಿದ್ದು, ಈ ಸೀಟುಗಳು ಏಳು ರೀತಿಯ ಮಸಾಜ್ ಶೈಲಿ ಒಳಗೊಂಡಿರುತ್ತವೆ. ಹೀಟೆಡ್, ವೆಂಟಿಲೇಟೆಡ್ ವ್ಯವಸ್ಥೆಗಳನ್ನು ಸಹ ಒಳಗೊಂಡಿರುತ್ತದೆ. ಹಿಂದಿನ ಸೀಟಿನವರಿಗೆ ಪ್ರತ್ಯೇಕ ಟಿವಿ ವ್ಯವಸ್ಥೆ, ಕಾಲು ಉದ್ದ ಚಾಚಿ ಮಲಗುವ ವ್ಯವಸ್ಥೆ. ಪ್ರತ್ಯೇಕ ಲೈಟಿನ ವ್ಯವಸ್ಥೆ. ಕಾರಿನ ಹಲವು ಆಯ್ಕೆಗಳು ಹಿಂದಿನ ಸೀಟಿನವರಿಗೆ ನೀಡಲಾಗಿರುತ್ತದೆ.