ಬಾಲಿವುಡ್ ಬೆಡಗಿ ನೇಹಾ ಧೂಪಿಯಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಳೆದ 22 ವರ್ಷಗಳಿಂದ ಚಿತ್ರರಂಗದಲ್ಲಿ ಇದ್ರೂ ತನಗೆ ಸರಿಯಾಗಿ ಸಿನಿಮಾವಕಾಶ ಸಿಗುತ್ತಿಲ್ಲ ಎಂದು ಸಂದರ್ಶನವೊಂದರಲ್ಲಿ ನಟಿ ಮಾತನಾಡಿದ್ದಾರೆ. ಕಳೆದ 3-4 ತಿಂಗಳಿಂದ ನನಗೆ ದಕ್ಷಿಣದ ಚಿತ್ರರಂಗದಿಂದ ಸಿನಿಮಾ ಆಫರ್ಗಳು ಅರಸಿ ಬರುತ್ತಿವೆ. ಅಲ್ಲಿನವರ ಬಗ್ಗೆ ನನಗೆ ಗೊತ್ತಿಲ್ಲ. ಹಾಗಾಗಿ ಸಿನಿಮಾ ಅವಕಾಶ ಒಪ್ಪಿಕೊಳ್ತಿಲ್ಲ. ಆದರೆ ಬಾಲಿವುಡ್ನಲ್ಲಿ ನಮ್ಮವರು, ನನ್ನ ಸಾಮರ್ಥ್ಯದ ಬಗ್ಗೆ ಗೊತ್ತಿದ್ದರೂ ಆಫರ್ ಕೊಡುತ್ತಿಲ್ಲ ಎಂದಿದ್ದಾರೆ. ನಿಮ್ಮ ನಟನೆ ಚೆನ್ನಾಗಿದೆ ಅಂತಾರೆ, ಆದರೆ ಸಿನಿಮಾ ಅವಕಾಶ ಕೊಡಲ್ಲ ಎಂದು ಬೇಸರ ಹೊರಹಾಕಿದ್ದಾರೆ ನಟಿ ನೇಹಾ ಧೂಪಿಯಾ.
ಪಾತ್ರಕ್ಕಾಗಿ ಕಡೆಯ ಬಾರಿ ನನಗೆ ಯಾವಾಗ ಕರೆ ಬಂದಿತ್ತು ಎಂಬುದು ನೆನಪಿಲ್ಲ ಎಂದು ನೇಹಾ ಹೇಳಿದ್ದಾರೆ. ಸಿನಿಮಾದಲ್ಲಿ ಬೇಡ ಕೊನೆ ಪಕ್ಷ ವೆಬ್ ಸರಣಿಯಲ್ಲಿ ಆದರೂ ಅವಕಾಶ ಕೊಡಬಹುದು. ಆದರೆ ಅಲ್ಲಿಯೂ ಅವಕಾಶಕ್ಕೆ ಕಲ್ಲು ಹಾಕುವವರು ಜಾಸ್ತಿ. ಇಂದಿಗೂ ಸಿನಿಮಾ ಆಫರ್ಗಾಗಿ ಕಷ್ಟಪಡುತ್ತಿದ್ದೇನೆ ಎಂದು ನಟಿ ನೇಹಾ ಮಾತನಾಡಿದ್ದಾರೆ.