ಚಿಕ್ಕ ವಯಸ್ಸಿನಲ್ಲೇ ಅಶ್ಲೀಲ ವೆಬ್ಸೈಟ್ನಲ್ಲಿ ನನ್ನ ಫೋಟೋ ಬಳಕೆ
ಅಪ್ಪ-ಅಮ್ಮನ ಜೊತೆ ಇದ್ದಾಗ ಕ್ಲಿಕ್ಕಿಸಿದ ನನ್ನ ಫೋಟೋಗಳನ್ನು ಮೀಡಿಯಾದಲ್ಲಿ ಪ್ರಕಟಿಸಿದ್ದರು
ಬೋಲ್ಡ್ ಫೋಟೋಗಳ ಬಗ್ಗೆ ಮಾತಾಡಿದ ಜಾನ್ವಿ ಕಪೂರ್
ಜಾನ್ವಿ ಕಪೂರ್ ಸಖತ್ ಬೋಲ್ಡ್ ಆಗಿ ಬಟ್ಟೆ ಹಾಕಿಕೊಳ್ತಾರೆ. ಸಖತ್ ಗ್ಲಾಮರಸ್ ಆಗಿಯೂ ಕೂಡ ಕಾಣಿಸಿಕೊಳ್ತಾರೆ. ಜಾನ್ವಿ ಫೋಟೋಗಳು ಪಡ್ಡೆ ಹುಡುಗರ ಹೃದಯಕ್ಕೆ ಅದೆಷ್ಟು ಬಾರಿ ಕಿಚ್ಚು ಹಚ್ಚಿವೆಯೋ ಗೊತ್ತಿಲ್ಲ. ಜಾನ್ವಿ ಫೋಟೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಕೆಲವರು ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಇನ್ನೂ ಕೆಲವರು ಕೆಟ್ಟದಾಗಿ ಕಮೆಂಟ್ ಮಾಡ್ತಾರೆ. ಇದರ ಬಗ್ಗೆ ಜಾನ್ವಿ ಕಪೂರ್ ಮಾತಾಡಿದ್ದಾರೆ ಇತ್ತೀಚೆಗೆ ಅವರು ಕರಣ್ ಜೋಹರ್ ಅವರ ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಮ್ಮ ಫೋಟೋಗಳನ್ನ ಅಶ್ಲೀಲ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಿದ್ದರು ಅಂತ ಜಾನ್ವಿ ಕಪೂರ್ ಹೇಳಿದ್ದಾರೆ.
ಮಿಸ್ಟರ್ ಆ್ಯಂಡ್ ಮಿಸೆಸ್ ಮಾಹಿ’ ಸಿನಿಮಾದಲ್ಲಿ ಜಾನ್ವಿ ನಟಿಸಿದ್ದಾರೆ. ಮೇ 31ರಂದು ಈ ಸಿನಿಮಾ ರಿಲೀಸ್ ಆಗಲಿದೆ.. ಈ ಸಿನಿಮಾದ ಪ್ರಮೋಷನ್ ಗಾಗಿ ಕರಣ್ ಜೋಹರ್ ಸಂದರ್ಶನ ನಡೆಸಿದ್ದಾರೆ. ಈ ವೇಳೆ ಜಾನ್ವಿ ಕಪೂರ್ ಬೋಲ್ಡ್ ಫೋಟೋಗಳ ಬಗ್ಗೆ ಮಾತಾಡಿದ್ದಾರೆ.
ಇದನ್ನ ನಾನು ತುಂಬಾ ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ. ನಾನು 12 ಅಥವಾ 13 ವರ್ಷದ ಬಾಲಕಿ ಆಗಿದ್ದಾಗ ಮೊದಲ ಬಾರಿಗೆ ನನ್ನ ಕೆಟ್ಟ ರೀತಿಯಲ್ಲಿ ಬಿಂಬಿಸಿದ್ದವು. ಅಪ್ಪ-ಅಮ್ಮನ ಜೊತೆ ನಾನು ಕಾರ್ಯಕ್ರಮವೊಂದಕ್ಕೆ ಹೋಗಿದ್ದೆ. ಆಗ ಕ್ಲಿಕ್ಕಿಸಿದ ನನ್ನ ಫೋಟೋಗಳನ್ನು ಮೀಡಿಯಾದಲ್ಲಿ ಪ್ರಕಟಿಸಿದ್ದರು. ಆಗ ತಾನೇ ಸೋಶಿಯಲ್ ಮೀಡಿಯಾ ಅಥವಾ ಇನ್ಸ್ಟಾಗ್ರಾಮ್ ಇಂಡಿಯಾಗೆ ಕಾಲಿಟ್ಟಿತ್ತು. ಅಶ್ಲೀಲ ವೆಬ್ಸೈಟ್ ರೀತಿ ಕಾಣುವಂತಹ ಪೇಜ್ ನಲ್ಲಿ ನನ್ನ ಫೋಟೋಗಳನ್ನ ಅಪ್ಲೋಡ್ ಮಾಡಿದ್ರು. ನಮ್ಮ ಶಾಲೆಯಲ್ಲಿನ ಹುಡುಗರು ಆ ಫೋಟೋಗಳನ್ನ ನೋಡಿ ಅಣುಕಿಸುತ್ತಿದ್ರು ಅಂತ ಹೇಳಿದ್ದಾರೆ.
ಇಂದಿಗೂ ಕೂಡ ಜಾನ್ವಿ ಕಪೂರ್ ಅವರನ್ನ ಕೆಲವರು ಟ್ರೋಲ್ ಮಾಡುತ್ತಾರೆ. ನೆಪೋಟಿಸಂ ಕಿಡ್ ಎಂದು ಜನರು ಅಣಕಿಸುತ್ತಾರೆ. ಅದನ್ನೆಲ್ಲ ಎದುರಿಸಿಕೊಂಡು ಜಾನ್ವಿ ಕಪೂರ್ ಮುಂದೆ ಸಾಗುತ್ತಿದ್ದಾರೆ.