- ಮಾಜಿ ಸಿಎಂ ಸುಶೀಲ್ಕುಮಾರ್ ಶಿಂಧೆ ಮೊಮ್ಮಗ ಜೊತೆ ಸಾರಾ ನಿಶ್ಚಿತಾರ್ಥ
- ಶ್ರೀಮಂತ ಉದ್ಯಮಿ ಜೊತೆಗೆಸಾರಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರಂತೆ
- ಯಾವುದು ನಿಜ ಯಾವುದು ಸುಳ್ಳು ಅನ್ನೋದು ಮಾತ್ರ ಗೊತ್ತಿಲ್ಲ
ಸಾರಾ ಅಲಿಖಾನ್ ಮದುವೆ ಬಗ್ಗೆ ಸದ್ಯಕ್ಕೆ ಸುದ್ದಿಗಳ ಮೇಲೆ ಸುದ್ದಿಗಳು ಹರಿದಾಡುತ್ತಿರುವಾಗ ಯಾರಿಗೂ ಹೇಳದೇ ಕೇಳದೇ ಸಾರಾ ಅಲಿಖಾನ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿದೆ. ಇನ್ನೂ ಅಂತೆ-ಕಂತೆಯ ವಿಚಾರ ಹೀಟ್ ನಲ್ಲಿರೋವಾಗಲೇ ಕೆಲವರು ಸಾರಾ ಅಲಿ ಖಾನ್ ಮದುವೆಯಾಗಲಿರುವ ಹುಡುಗನ ಜಾತಕವನ್ನೇ ಸೋಷಿಯಲ್ ಮಿಡಿಯಾದಲ್ಲಿ ಹರಿ ಬಿಟ್ಟಿದ್ದಾರೆ. ಸಾರಾ ಅಲಿಖಾನ್ ಮದುವೆ ಆಗುವ ಆ ಅದೃಷ್ಟವಂತ ಬೇರೆ ಯಾರು ಅಲ್ಲ ಮಾಜಿ ಮುಖ್ಯಮಂತ್ರಿ ಸುಶೀಲ್ಕುಮಾರ್ ಶಿಂಧೆ ಮೊಮ್ಮಗ ವೀರ್ ಪಹಾರಿಯಾ ಅಂತ ಗಾಸಿಪ್ ಎಬ್ಬಿಸಿದ್ದಾರೆ.
ಹಾಗೊಂದು ವೇಳೆ ಹರಿದಾಡುತ್ತಿರುವ ಈ ಸುದ್ದಿ ನಿಜ ಆಗಿದ್ದೇ ಆದಲ್ಲಿ, ಜಾಹ್ನವಿ ಕಪೂರ್ ಮತ್ತು ಸಾರಾ ಅಲಿ ಖಾನ್ ಒಂದೇ ಮನೆಗೆ ಸೊಸೆಯಾಗಲಿದ್ದಾರೆ. ಅಂದಹಾಗೆ ಜಾಹ್ನವಿ ಕಪೂರ್ ಹೃದಯವನ್ನ ಗೆದ್ದಿರುವ ಶಿಖರ್ ಇದೇ ಸುಶೀಲ್ಕುಮಾರ್ಶಿಂಧೆ ಅವರಿಂದ ಮತ್ತೊಬ್ಬ ಮೊಮ್ಮಗ.
ಈ ಸುದ್ದಿಯ ಜೊತೆಗೆ ಇನ್ನೊಂದು ಗಾಸಿಪ್ ಸಾರಾ ಅಲಿಖಾನ್ ವಿಚಾರದಲ್ಲಿ ಹಬ್ಬಿದೆ. ಶ್ರೀಮಂತ ಉದ್ಯಮಿ ಜೊತೆಗೆ ಈಗಾಗಲೇ ಸಾರಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಅಂತ. ಒಟ್ಟಾರೆ ಬಾಲಿವುಡ್ ನಲ್ಲಿ ಸಾರಾ ಅಲಿಖಾನ್ ವಿಚಾರವಾಗಿ ದಿನಕ್ಕೊಂದು ಸುದ್ದಿ ಹರಿದಾಡುತ್ತಿದೆ. ಅದರಲ್ಲಿ ಯಾವುದು ನಿಜ ಯಾವುದು ಸುಳ್ಳು ಅನ್ನೋದು ಮಾತ್ರ ಗೊತ್ತಿಲ್ಲ.