ಬಾಲಿವುಡ್ನ ಕ್ಯೂಟ್ ಕಪಲ್ ಆಗಿರುವ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಅವರ ಸಂಸಾರದಲ್ಲಿ ಬಿರುಕು ಮೂಡಿರಬಹುದು ಎಂಬ ಅನುಮಾನ ಇದೆ. ಅದಕ್ಕೆ ಪೂರಕ ಎನ್ನುವಂತಹ ಅನೇಕ ಸಂಗತಿಗಳು ನಡೆಯುತ್ತಿವೆ. ಡಿವೋರ್ಸ್ ಪಡೆಯಲು ಈ ದಂಪತಿ ನಿರ್ಧರಿಸಿದ್ದಾರೆ ಎಂಬ ಗಾಸಿಪ್ ಹರಿದಾಡುತ್ತಿದೆ. ಆದರೆ ಈ ವಿಷಯದ ಬಗ್ಗೆ ಐಶ್ವರ್ಯಾ ರೈ ಅವರಾಗಲೀ, ಅಭಿಷೇಕ್ ಬಚ್ಚನ್ ಅವರಾಗಲಿ ಯಾವುದೇ ಹೇಳಿಕೆ ನೀಡಿಲ್ಲ. ಹಾಗಿದ್ದರೂ ಕೂಡ ಗಾಸಿಪ್ ಹೆಚ್ಚಾಗುತ್ತಲೇ ಇದೆ.
ಅಭಿಷೇಕ್ ಬಚ್ಚನ್ ಅವರ ಇತ್ತೀಚೆಗಿನ ಸೋಶಿಯಲ್ ಮೀಡಿಯಾ ಪೋಸ್ಟ್ ಕೂಡ ಒಂದಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.
ಅಭಿಷೇಕ್ ಬಚ್ಚನ್ ಅವರು ಫ್ಯಾಮಿಲಿ ಮ್ಯಾನ್. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಪತ್ನಿಯಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಎಂಬುದು ಅಚ್ಚರಿಯ ಸಂಗತಿ. ಈ ಮೊದಲು ರಾಧಿಕಾ ಮರ್ಚೆಂಟ್ ಹಾಗೂ ಅನಂತ್ ಅಂಬಾನಿಯ ಮದುವೆಗೆ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಅವರು ಪ್ರತ್ಯೇಕವಾಗಿ ಆಗಮಿಸಿದ್ದರು. ಇದರಿಂದ ಜನರ ಅನುಮಾನ ಜಾಸ್ತಿ ಆಗಿತ್ತು.
ಈಗ ಅಭಿಷೇಕ್ ಬಚ್ಚನ್ ಅವರು ಒಂಟಿಯಾಗಿ ಪ್ಯಾರಿಸ್ನಲ್ಲಿ ಸುತ್ತಾಟ ನಡೆಸಿದ್ದಾರೆ.
ಒಲಂಪಿಕ್ಸ್ ನೋಡುವ ಸಲುವಾಗಿ ಅಭಿಷೇನ್ ಬಚ್ಚನ್ ಅವರು ಪ್ಯಾರಿಸ್ಗೆ ತೆರಳಿದ್ದರು. ನೀರಜ್ ಚೋಪ್ರಾ ಜಾವೆಲಿನ್ ಎಸೆತದಲ್ಲಿ ಪದಕ ಗೆದ್ದಿದ್ದನ್ನು ಅಭಿಷೇಕ್ ಬಚ್ಚನ್ ಕಣ್ತುಂಬಿಕೊಂಡಿದ್ದಾರೆ. ಪದಕ ಗೆದ್ದ ಅವರನ್ನು ಅಭಿಷೇಕ್ ತಬ್ಬಿಕೊಂಡಿದ್ದಾರೆ. ಸ್ಟೇಡಿಯಂನಲ್ಲಿ ತ್ರಿವರ್ಣ ಧ್ವಜವನ್ನು ಹಿಡಿದು ಅವರು ಸಂಭ್ರಮಿಸಿದ್ದಾರೆ. ಬಳಿಕ ಐಫೆಲ್ ಟವರ್ಗೆ ಭೇಟಿ ನೀಡಿ ಎಂಜಾಯ್ ಮಾಡಿದ್ದಾರೆ.