ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ದಂಪತಿ ರಂಭಾಪುರಿ ಮಠಕ್ಕೆ ಉಡುಗೊರೆಯಾಗಿ ಯಾಂತ್ರಿಕ ಆನೆಯನ್ನು ನೀಡಿದ್ದು, ಶನಿವಾರ ಮಠದ ಆವರಣದಲ್ಲಿ ಶ್ರೀ ವೀರ ಸೋಮೇಶ್ವರ ಶಿವಚಾರ್ಯ ಸ್ವಾಮಿಗಳು ಅನಾವರಣಗೊಳಿಸಿದರು.
ದೇವಸ್ಥಾನದ ಸಮಾರಂಭಗಳಲ್ಲಿ ಜೀವಂತ ಆನೆಗಳನ್ನು ಬದಲಿಸಲು ಉದ್ದೇಶದಿಂದ ವೀರಭದ್ರಶ್ವರ ಎಂಬ ಹೆಸರಿನ ಈ ಯಾಂತ್ರಿಕ ಆನೆ ಉಪಯೋಗವಾಗುತ್ತದೆ. ಆನೆ ನೋಡಲು ಥೇಟ್ ಜೀವಂತ ಆನೆಯಂತೆ ಇದೆ. ಅದರಂತೆ ಕಿವಿ, ಮೂಗು ಮತ್ತು ಬಾಲ ಅಲಾಡಿಸುತ್ತದೆ. ಮೂರು ಮೀಟರ್ ಎತ್ತರದ ಆನೆಯೂ 800 ಕಿಲೋ ತೂಕ ಹೊಂದಿದೆ.
ನಟಿ ಶಿಲ್ಪಾ ಶೆಟ್ಟಿ ಮತ್ತು ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ ಇಂಡಿಯಾ ಮತ್ತು ಕಂಪ್ಯಾಷನ್ ಅನ್ಲಿಮಿಟೆಡ್ ಪ್ಲಸ್ ಆಕ್ಷನ್ ಸಂಸ್ಥೆ ಮಠಕ್ಕೆ ಉಡುಗೊರೆಯಾಗಿ ನೀಡಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ರಂಭಾಪುರಿ ವೀರರುದ್ರಮುನಿ ಸ್ವಾಮಿಯವರ ಜನ್ಮಶತಮಾನೋತ್ಸವದ ಅಂಗವಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ, ಇಂಧನ ಸಚಿವ ಕೆ.ಜೆ ಜಾರ್ಜ್ ಸಮ್ಮುಖದಲ್ಲಿ ಆನೆಯನ್ನು ಅನಾವರಣಗೊಳಿಸಲಾಯಿತು.